Thursday, September 25, 2025

FOOD | ಬಿಸಿ ಬಿಸಿ ಮಶ್ರೂಮ್ ಸೂಪ್ ಕುಡೀತಿದ್ರೆ ಆಹಾ! ಅದ್ಭುತ ರುಚಿ

ತಂಪಾದ ಹವಾಮಾನದಲ್ಲಿ ಅಥವಾ ಆರೋಗ್ಯ ಕಾಪಾಡಿಕೊಳ್ಳಬೇಕೆನಿಸಿದಾಗ ಬಿಸಿ ಬಿಸಿ ಸೂಪ್ ಕುಡಿಯುವುದು ಶರೀರಕ್ಕೆ ಆರಾಮ ನೀಡುತ್ತದೆ. ಮಶ್ರೂಮ್ ಪೌಷ್ಟಿಕಾಂಶಯುಕ್ತವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಗುಣಗಳಿಂದ ಕೂಡಿರುವ ಈ ಸೂಪ್‌ನ್ನು ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:

ಮಶ್ರೂಮ್ – 2 ಕಪ್
ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ¼ ಕಪ್
ಬೇಯಿಸಿದ ಗೋಧಿ – 2 ಕಪ್
ಚಿಕನ್/ವೆಜಿಟೇಬಲ್ ಸ್ಟಾಕ್ – 3 ಕಪ್
ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು – ¼ ಕಪ್
ಆಲಿವ್ ಎಣ್ಣೆ – 1 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ಉಪ್ಪು – ½ ಟೀಸ್ಪೂನ್
ಕರಿಮೆಣಸಿನ ಪುಡಿ – ಸ್ವಲ್ಪ (ರುಚಿಗೆ ತಕ್ಕಷ್ಟು)

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ ಹಾಗೂ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಹುರಿಯಿರಿ. ಈಗ ಮಶ್ರೂಮ್ ಸೇರಿಸಿ, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಮಧ್ಯಮ ಉರಿಯಲ್ಲಿ 8–10 ನಿಮಿಷ ಬೇಯಿಸಿ. ನಂತರ ಬೇಯಿಸಿದ ಗೋಧಿ ಸೇರಿಸಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ.

ಈಗ ಚಿಕನ್/ವೆಜಿಟೇಬಲ್ ಸ್ಟಾಕ್ ಸೇರಿಸಿ, ಕುದಿಯಲು ಬಿಡಿ. ಉರಿ ಕಡಿಮೆ ಮಾಡಿ 30 ನಿಮಿಷಗಳ ಕಾಲ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿ ಬಿಸಿ ಸರ್ವ್ ಮಾಡಿ.

ಇದನ್ನೂ ಓದಿ