ಬೇಕಾಗುವ ಸಾಮಗ್ರಿಗಳು:
* ಪನೀರ್ – 200 ಗ್ರಾಂ
* ಬ್ರೆಡ್ ಸ್ಲೈಸ್‌ಗಳು – 6-8
* ಈರುಳ್ಳಿ – 1
* ಟೊಮೆಟೊ – 1
* ಹಸಿರು ಮೆಣಸಿನಕಾಯಿ – 1
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಅರಿಶಿನ ಪುಡಿ – 1/2 ಚಮಚ
* ಗರಂ ಮಸಾಲಾ – 1/2 ಚಮಚ
* ಕೆಂಪು ಮೆಣಸಿನ ಪುಡಿ – 1/2 ಚಮಚ
* ಉಪ್ಪು – ರುಚಿಗೆ ತಕ್ಕಂತೆ
* ಎಣ್ಣೆ ಅಥವಾ ಬೆಣ್ಣೆ
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಪನೀರ್ ಚೂರುಗಳನ್ನು ಹಾಕಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಗರಂ ಮಸಾಲಾ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 15-20 ನಿಮಿಷಗಳ ಕಾಲ ಹಾಗೆ ಇಡಿ. ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದರಲ್ಲಿ ಈರುಳ್ಳಿ ಹಾಕಿ ಸ್ವಲ್ಪ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ. ಅದೇ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ. ಮ್ಯಾರಿನೇಟ್ ಮಾಡಿದ ಪನೀರ್ ಚೂರುಗಳನ್ನು ಹಾಕಿ ಎರಡೂ ಬದಿಗಳು ಗರಿಗರಿಯಾಗುವವರೆಗೆ ಹುರಿಯಿರಿ. ಬ್ರೆಡ್ ಸ್ಲೈಸ್‌ಗಳಿಗೆ ಬೆಣ್ಣೆ ಅಥವಾ ಎಣ್ಣೆ ಸವರಿಕೊಳ್ಳಿ. ಒಂದು ಸ್ಲೈಸ್ ಮೇಲೆ ತಯಾರಿಸಿದ ಸ್ಟಫಿಂಗ್ ಹರಡಿ. ಅದರ ಮೇಲೆ ಹುರಿದ ಪನೀರ್ ಗಳನ್ನು ಇಡಿ. ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ. ಸ್ಯಾಂಡ್‌ವಿಚ್ ಗ್ರಿಲ್ ಅಥವಾ ಟೋಸ್ಟರ್‌ನಲ್ಲಿ ಸ್ಯಾಂಡ್‌ವಿಚ್ ಅನ್ನು ಗರಿಗರಿಯಾಗುವವರೆಗೆ ಗ್ರಿಲ್ ಮಾಡಿ. ಈಗ ಟೇಸ್ಟಿ ಪನ್ನೀರ್ ಸ್ಯಾಂಡ್‌ವಿಚ್ ಸವಿಯಲು ಸಿದ್ದ.