ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ಮಂದಿ ಕಾಲೇಜು ವಿದ್ಯಾರ್ಥಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಓರ್ವ ವಿದ್ಯಾರ್ಥಿಗೆ ಸ್ನೇಹಿತೆಯಾಗಿದ್ದಳು. ಇದೀಗ ಪ್ರಕರಣ ದಾಖಲಾಗಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ. 17 ವರ್ಷದ ಬಾಲಕಿ ಸ್ನಾಪ್ಚಾಟ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಳು.
ನಂತರ ಆಕೆಯ ಮೇಲೆ 7 ವಿದ್ಯಾರ್ಥಿಗಳು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೋಗಿದ್ದಳು, ಬಳಿಕ ಒಂದು ದಿನದವರೆಗೆ ನಾಪತ್ತೆಯಾಗಿದ್ದಳು. ಸೋಮವಾರ ಹಿಂದಿರುಗಿದ್ದಳು. ಮನೆಗೆ ಹಿಂದುರಿಗಿದ ಬಳಿಕ ಅಜ್ಜಿಯ ಬಳಿ ಹುಡುಗನೊಬ್ಬ ತನ್ನ ಕೋಣೆಯಲ್ಲಿ ಬಂಧಿಸಿ ತನ್ನ ಆರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ಮಾಡಿದ್ದಾನೆಂದು ತಿಳಿಸಿದಳು.
ಬಾಲಕಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ತನ್ನ ಮನೆಯಲ್ಲಿ ಮಾಹಿತಿ ನೀಡಿದ ನಂತರ, ಪೋಕ್ಸೋ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ನಡೆಯುತ್ತಿದ್ದು, ಪೊಲೀಸರು ಎಲ್ಲಾ 7 ವಿದ್ಯಾರ್ಥಿಗಳಾದ 19 ವರ್ಷದ ರಕ್ಷಿತ್, ಅಭಿನೇಶ್ವರನ್ ಮತ್ತು ನಿತೀಶ್ ಮತ್ತು 20 ವರ್ಷದ ದೀಪಕ್, ಯಾದವ್ ರಾಜ್, ಮುತ್ತು ನಾಗರಾಜ್ ಮತ್ತು ಜೆಬಿನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ.