ಗೊಂಗುರ ಚಟ್ನಿ ಅಥವಾ ಪುಂಡಿ ಪಲ್ಲೆ ಚಟ್ನಿ ಉತ್ತರ ಕರ್ನಾಟಕದ ಮನೆಗಳಲ್ಲಿ ಪ್ರತಿದಿನ ತಯಾರಾಗುವ ಒಂದು ವಿಧದ ಖಾದ್ಯ. ಇದು ಉಪ್ಪಿನಕಾಯಿಯ ಹಾಗೆ ಸ್ವಲ್ಪ ಖಾರವಾಗಿರುವುದರಿಂದ ಅನ್ನ, ಜೋಳದ ರೋಟಿ ಅಥವಾ ರಾಗಿಯ ರೊಟ್ಟಿಯೊಂದಿಗೆ ಅತ್ಯುತ್ತ ಕಾಂಬಿನೇಶನ್.
ಬೇಕಾಗುವ ಪದಾರ್ಥಗಳು:
ಗೊಂಗುರ ಎಲೆಗಳು – 2 ಕಪ್
ಬೆಳ್ಳುಳ್ಳಿ – 5-6 ಎಸಳು
ಹಸಿಮೆಣಸು – 3-4
ಕರಿಬೇವಿನ ಸೊಪ್ಪು – 6 ಎಲೆ
ಉಪ್ಪು – ರುಚಿಗೆ ತಕ್ಕಷ್ಟು
ಎಳ್ಳು – 1 ಟೇಬಲ್ ಸ್ಪೂನ್
ಶೇಂಗಾ – 2 ಟೇಬಲ್ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಒಗ್ಗರಣೆಗೆ:
ಒಣ ಮೆಣಸು – 2
ಸಾಸಿವೆ – 1 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವಿನ ಸೊಪ್ಪು, ಎಳ್ಳು, ಮತ್ತು ಶೇಂಗಾ ಹಾಕಿ ಹುರಿಯಿರಿ. ನಂತರ ತೊಳೆದು ಒಣಗಿಸಿರುವ ಗೊಂಗುರ ಎಲೆಗಳನ್ನು ಸೇರಿಸಿ, ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ, ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಈ ಎಲ್ಲವನ್ನು ಮಿಕ್ಸರ್ ಜಾರಿಗೆ ಹಾಕಿ, ಉಪ್ಪು, ಮೆಣಸಿನ ಪುಡಿ ಸೇರಿಸಿ, ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಚಟ್ನಿಯಾಗಿ ಗ್ರೈಂಡ್ ಮಾಡಿಕೊಳ್ಳಿ.
ಈಗ ಪ್ಯಾನ್‌ನಲ್ಲಿ ಒಗ್ಗರಣೆ ಮಾಡಲು ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ,ಈ ಒಗ್ಗರಣೆಯನ್ನು ತಯಾರಾದ ಚಟ್ನಿಗೆ ಸೇರಿಸಿ, ಚೆನ್ನಾಗಿ ಕಲಸಿದರೆ ಗೊಂಗುರ ಚಟ್ನಿ ರೆಡಿ