ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಮೀರ್ ಖಾನ್, ರಣ್‌ಬೀರ್ ಕಪೂರ್ ಹಾಗೂ ಕ್ರಿಕೆಟ್ ಮಂದಿಯ ಕೊಲ್ಯಾಬರೇಷನ್ ಇದಾಗಿದೆ.
ಇತ್ತೀಚೆಗೆ ಡ್ರೀಮ್ 11 ಜಾಹೀರಾತೊಂದು ಪ್ರಸಾರ ಕಂಡಿದೆ. ಇದರಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಜಾಹೀರಾತಿಗೆ ಖರ್ಚಾದ ಹಣದಲ್ಲಿ ಒಂದು ದೊಡ್ಡ ಬಜೆಟ್ನ ಸಿನಿಮಾನೇ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.
‘ಡ್ರೀಮ್ 11’ ಜಾಹೀರಾತಿನಲ್ಲಿ ನಟರಾದ ಆಮಿರ್ ಖಾನ್, ರಣಬೀರ್ ಕಪೂರ್, ಕ್ರಿಕೆಟರ್ಗಳಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮೊದಲಾದವರು ಇದ್ದರು. ಇನ್ನು, ಇದರ ಪ್ರಮೋಷನ್ಗೆ ಆಲಿಯಾ ಭಟ್ ಹಾಗೂ ಮೊದಲಾದವರನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಆಮಿರ್ ಖಾನ್ ಅವರು ಪ್ರತಿ ಜಾಹೀರಾತಿಗೆ 10-12 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ರೋಹಿತ್ ಶರ್ಮಾ ಅವರು 3.5 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ರಿಷಭ್ ಪಂತ್ 1-2 ಕೋಟಿ ರೂಪಾಯಿ, ರಣಬೀರ್ ಕಪೂರ್ 6 ಕೋಟಿ ರೂಪಾಯಿ, ಹಾರ್ದಿಕ್ ಪಾಂಡ್ಯ 2-3 ಕೋಟಿ ರೂಪಾಯಿ. ಅರ್ಬಾಜ್ ಖಾನ್ 35 ಲಕ್ಷ ರೂಪಾಯಿ, ಅಶ್ವಿನ್ 1 ಕೋಟಿ ರೂಪಾಯಿ, ಬೂಮ್ರಾ 2-3 ಕೋಟಿ ರೂಪಾಯಿ, ಜಾಕಿ ಶ್ರಾಫ್ 50 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರೆ. ಈ ಎಲ್ಲರೂ ಈ ಜಾಹೀರತಿನಲ್ಲಿ ಇದ್ದಾರೆ.
ಇವರ ಸಂಭಾವನೆ ಸೇರಿದರೆ 25-35 ಕೋಟಿ ರೂಪಾಯಿ ಆಗುತ್ತದೆ. ಇಷ್ಟಕ್ಕೆ ನಿಂತಿಲ್ಲ. ಈ ಜಾಹೀರಾತಿನ ಪ್ರೊಡಕ್ಷನ್ಗೂ ಹಣ ಬೇಕಾಗುತ್ತದೆ. ನಿರ್ದೇಶಕರಿಗೆ, ಸೆಟ್ ನಿರ್ಮಾಣಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ. ಈ ಜಾಹೀರಾತಿನ ಪ್ರಮೋಷನ್ಗೆ ಆಲಿಯಾ ಭಟ್ ಅವರನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಅವರು ಕೂಡ ಸಂಭಾವನೆ ಪಡೆದಿದ್ದಾರೆ. ಇದು ಸೇರಿದರೆ 40-50 ಕೋಟಿ ರೂಪಾಯಿವರೆಗೆ ಜಾಹೀರಾತು ನಿರ್ಮಾಣಕ್ಕೆ ಖರ್ಚಾಗಿದೆ ಎಂದು ವರದಿ ಆಗಿದೆ.