FOOD | ಆರೋಗ್ಯಕರ ಪೀನಟ್ ಬಟರ್‌ ಬರ್ಫಿ ಟ್ರೈ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೀನಟ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲೂ ಪೀನಟ್ ಬಟರ್ ಚಿಕ್ಕ ಮಕ್ಕಳಿಂದ ದೊಡ್ಡವರು ಕೂಡ ತಿನ್ನುವ ಫುಡ್ ಆಗಿದೆ. ಅದರಲ್ಲೂ ಈ ಡಯಟ್ ಮಾಡೋರು ಈ ಪೀನಟ್ ಬಟರ್ ಅನ್ನು ಬಹಳ ಇಷ್ಟ ಪಟ್ಟು ತಿಂತಾರೆ. ಮಕ್ಕಳು ಸಹ ಚಪಾತಿ, ಬ್ರೆಡ್ ಜೊತೆ ಸವಿಯಲು ಈ ಬಟರ್ ನ ಇಷ್ಟ ಪಡುತ್ತಾರೆ. ಆದರೆ ಈ ಪೀನಟ್ ಬಟರ್ ನಲ್ಲಿ ಬರ್ಫಿ ಮಾಡೋದು ಹೇಗೆ ಅಂತ ನಿಮಗೆ ಗೊತ್ತ? ಗೊತ್ತಿಲ್ಲ ಅಂದ್ರೆ ಈ ರೆಸಿಪಿ ನೋಡಿ ನೀವು ಮನೇಲಿ ಟ್ರೈ ಮಾಡಿ ಸವಿಯಿರಿ..

Quick Easy Peanut Butter Fudge | Recipe | Sunbeam

ಬೇಕಾಗುವ ಪಧಾರ್ಥಗಳು:

ಪೀನಟ ಬಟರ್ – 1 ಕಪ್
ಎಣ್ಣೆ – ಅರ್ಧ ಕಪ್
ಮೇಪಲ್ ಸಿರಪ್ – ಅರ್ಧ ಕಪ್
ವೆನಿಲ್ಲಾ ಎಸೆನ್ಸ್– ೧/೪ ಚಮಚ
ಪುಡಿ ಮಾಡಿದ ನೆಲ ಕಡಲೆ – ಕಾಲು ಕಪ್

Peanut Butter Fudge Recipe | Food Network Kitchen | Food Network

ಪೀನಟ್ ಬಟರ್ ಬರ್ಫಿ ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಸೇರಿಸಿ ನಂತರ ಮಿಶ್ರಣ ಮಾಡಿ.
ಒಂದು ಪ್ಲೇಟ್ ಅಥವಾ ಬಟ್ಟಲಲ್ಲಿ ಬಟರ್ ಪೇಪರ್ ಅಥವಾ ತುಪ್ಪವನ್ನು ಸವರಿ, ಅದರ ಮೇಲೆ ತಯಾರಿಸಿರುವ ಮಿಶ್ರಣವನ್ನು ಹರಡಿರಿ.
ತಟ್ಟೆಯಲ್ಲಿ ಇಟ್ಟಿರುವ ಆ ಮಿಶ್ರಣವನ್ನು ಫ್ರಿಜ್‌ನಲ್ಲಿ ಇಟ್ಟು, ಸುಮಾರು 1 ಗಂಟೆ ಕಾಲ ಅದು ಗಟ್ಟಿಯಾಗಲು ಬಿಟ್ಟುಬಿಡಿ.
ಒಂದು ಗಂಟೆಯ ಬಳಿಕ ತಟ್ಟೆಯನ್ನು ಹೊರತೆಗೆದು, ನಿಮಗೆ ಬೇಕಾದ ಆಕಾರದಲ್ಲಿ ಬರ್ಫಿಯನ್ನು ಕತ್ತರಿಸಿಕೊಳ್ಳಿ.
ಇದೀಗ ಆರೋಗ್ಯಕರ ಹಾಗೂ ರುಚಿಕರ ಪೀನಟ್ ಬಟರ್ ಬರ್ಫಿ ಮನೆಮಂದಿಯೆಲ್ಲ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!