VIRAL | ಮಾನವೀಯತೆ ಅನ್ನೋದೇ ಇಲ್ವಾ? ರ‍್ಯಾಪಿಡೋ ಬೈಕ್ ಸವಾರನಿಗೆ ಹೀಗಾ ಮಾಡೋದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಒಂದ್ರಿಂದ ಇನ್ನೊಂದು ಜಾಗ ತಲುಪೋದಕ್ಕೆ ಸಾಕಷ್ಟು ಆಪ್ಷನ್ಸ್ ಇವೆ. ಅದರಲ್ಲಿ ರ‍್ಯಾಪಿಡೊ ಬೈಕ್ಸ್ ಕೂಡ ಒಂದು, ಬುಕ್ ಮಾಡಿದ್ರೆ ಬೈಕ್ ಸವಾರ ನಿಮ್ಮನ್ನು ಹೇಳಿದ ಸ್ಥಳಕ್ಕೆ ತಲುಪಿಸ್ತಾನೆ. ಆದರೆ ಇಲ್ಲೊಬ್ಬ ಗ್ರಾಹಕ ರ‍್ಯಾಪಿಡೋ ಸವಾರನ ಜೊತೆ ಅಮಾನವೀಯವಾಗಿ ವರ್ತಿಸಿದಿದ್ದಾನೆ.

ಏನಾಯ್ತು?
ತೆಲಂಗಾಣದ ಹೈದರಾಬಾದ್‌ನಲ್ಲಿ ಗ್ರಾಹಕನೊಬ್ಬ ರ‍್ಯಾಪಿಡೋ ಬುಕ್ ಮಾಡಿದ್ದಾನೆ. ಸವಾರ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಪೆಟ್ರೋಲ್ ಖಾಲಿಯಾಗಿದೆ. ಆನ್‌ಲೈನ್ ಪೇಮೆಂಟ್ ಆಗೋಗಿದೆ. ಈಗ ಏನು ಮಾಡೋದು ಸವಾರನಿಗೆ ಅರ್ಥವಾಗಿಲ್ಲ. ಪೆಟ್ರೋಲ್ ಖಾಲಿ ಆಗಿದೆ, ಸ್ವಲ್ಪ ದೂರದಲ್ಲೇ ಬಂಕ್ ಇದೆ, ಸ್ವಲ್ಪ ದೂರ ನಡೆದುಕೊಂಡು ಬನ್ನಿ ಎಂದು ರ‍್ಯಾಪಿಡೋ ಡ್ರೈವರ್ ರಿಕ್ವೆಸ್ಟ್ ಮಾಡಿದ್ದಾನೆ. ಅದಕ್ಕೆ ಒಪ್ಪದ ಸವಾರ ಬೈಕ್‌ನಿಂದ ಇಳಿಯದೇ ಕುಳಿತಿದ್ದಾನೆ. ಡ್ರೈವರ್ ಸವಾರನ ಸಮೇತ ಗಾಡಿ ತಳ್ಳಿದ್ದಾನೆ. ಬೈಕ್ ತೂಕದ ಜೊತೆ ವ್ಯಕ್ತಿ ತೂಕಕ್ಕೆ ಡ್ರೈವರ್ ಹೈರಾಣಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದ ಜನ ಸವಾರನಿಗೆ ಛೀಮಾರಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!