FOOD | ಆರೋಗ್ಯಕರ ಲೆಮನ್ ಕೊರಿಯಾಂಡರ್ ಸೂಪ್! ನೀವೂ ಒಮ್ಮೆ ಟ್ರೈ ಮಾಡಿ

ಲೆಮನ್ ಕೊರಿಯಾಂಡರ್ ಸೂಪ್ ಆರೋಗ್ಯಕರವಾದ ಆಯ್ಕೆಯಾಗಿದೆ. ಸೂಪ್ ಅನ್ನು ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯೊಂದಿಗೆ ತಯಾರಿಸಲಾಗುವುದರಿಂದ ಇದು ಉದರದ ಆರೋಗ್ಯಕ್ಕೂ ಉತ್ತಮವಾಗಿದೆ.

ಬೇಕಾಗುವ ಪದಾರ್ಥಗಳು
1 ಟೀಸ್ಪೂನ್ ಎಣ್ಣೆ
3 ಬೆಳ್ಳುಳ್ಳಿ ಎಸಳುಗಳು , (ನುಣ್ಣಗೆ ಕತ್ತರಿಸಿದ್ದು)
1/2 ಇಂಚಿನ ಶುಂಠಿ , (ಸಣ್ಣಗೆ ಹೆಚ್ಚಿದ್ದು)
1/3 ಕಪ್ ಸ್ಪ್ರಿಂಗ್ ಆನಿಯನ್
1/3 ಕಪ್ ಕೊತ್ತಂಬರಿ ಸೊಪ್ಪು (ನುಣ್ಣಗೆ ಕತ್ತರಿಸಿದ್ದು)
1/3 ಕಪ್ ಕ್ಯಾರೆಟ್
3 ಕಪ್ ನೀರು
ಉಪ್ಪು , ರುಚಿಗೆ ತಕ್ಕಷ್ಟು
1 ಟೀಸ್ಪೂನ್ ಕರಿಮೆಣಸಿನ ಪುಡಿ
1 ಚಮಚ ಕಾರ್ನ್‌ಫ್ಲೋರ್
1 ಚಮಚ ನಿಂಬೆ ರಸ ,

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ, ಹುರಿದ ನಂತರ ಈರುಳ್ಳಿ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಆಗುತ್ತಿದಂತೆ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.

ಈಗ ಒಂದು ಸಣ್ಣ ಮಿಕ್ಸಿಂಗ್ ಬೌಲ್‌ನಲ್ಲಿ, ಕಾರ್ನ್‌ಫ್ಲೋರ್ ಅನ್ನು 1/4 ಕಪ್ ನೀರಿನೊಂದಿಗೆ ಸೇರಿಸಿ, ಯಾವುದೇ ಗಂಟುಗಳಾಗದಂತೆ ಕಲಸಿ. ಈ ಮಿಶ್ರಣವನ್ನು ಸೂಪ್ ಗೆ ಸೇರಿಸಿ ಕುದಿಸಿರಿ, ಈಗ ಇದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ ಮತ್ತೊಮ್ಮೆ ಕುದಿಸಿ.

ಕೊನೆಗೆ ಉರಿಯನ್ನು ಆಫ್ ಮಾಡಿ ನಿಂಬೆ ರಸವನ್ನು ಸೇರಿಸಿದರೆ ಲೆಮನ್ ಕೊರಿಯಾಂಡರ್ ಸೂಪ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!