IPL ಕುರಿತು ಭವಿಷ್ಯ ನುಡಿದ ಯುವರಾಜ್ ಸಿಂಗ್: ಈ ತಂಡಾನೇ ಪ್ರಶಸ್ತಿ ಗೆಲ್ಲೋದಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಋತುವಿನ ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಕುರಿತು ಭವಿಷ್ಯ ನುಡಿದಿದ್ದಾರೆ. .

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಯುವರಾಜ್, ನನ್ನ ನೆಚ್ಚಿನ ತಂಡ ಸನ್‌ರೈಸರ್ಸ್ ಹೈದರಾಬಾದ್, ಆದರೆ ಈ ವರ್ಷ ಪಂಜಾಬ್ ಕಿಂಗ್ಸ್ (PBKS ) ಟ್ರೋಫಿ ಗೆಲ್ಲಬಹುದು ಎಂಬ ಭಾವನೆ ನನ್ನದು ಎಂದು ಹೇಳಿದ್ದಾರೆ. ಈ ಭವಿಷ್ಯವಾಣಿಯು ಐಪಿಎಲ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ, ಏಕೆಂದರೆ PBKS ಇದುವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

ಪ್ರಸ್ತುತ ಐಪಿಎಲ್ 2025 ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ 12 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳಲ್ಲಿವೆ. ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ. PBKS ಮತ್ತು ಲಕ್ನೋ ಸೂಪರ್ 10 ಅಂಕಗಳೊಂದಿಗೆ5 ಮತ್ತು6ನೇ ಸ್ಥಾನದಲ್ಲಿವೆ.

ಯುವರಾಜ್ ಸಿಂಗ್‌ಗೆ PBKSನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಪಂಜಾಬ್‌ನ ಚಂಡೀಗಢದವರಾದ ಯುವರಾಜ್ 2008ರಲ್ಲಿ PBKSಗಾಗಿ ಐಪಿಎಲ್ ಚೊಚ್ಚಲ ಪಂದ್ಯವಾಡಿದ್ದರು. ಅವರ ಭವಿಷ್ಯವಾಣಿಯು PBKS ಅಭಿಮಾನಿಗಳಿಗೆ ಭರವಸೆಯನ್ನು ತುಂಬಿದೆ. ಆದರೂ ಯುವರಾಜ್ ಸಿಂಗ್ ಭಾವಿಷ್ಯವಾಣಿ ನಿಜವಾಗುತ್ತೋ ಇಲ್ಲವೋ ಎಂದು ಕಾದುನೋಡಬೇಕಷ್ಟೇ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!