¾ ಕಪ್ ಮೈದಾ ಹಿಟ್ಟು
1 ಟೇಬಲ್ ಸ್ಪೂನ್ ಸಕ್ಕರೆ
1 ಟಿ ಸ್ಪೂನ್ ಬೇಕಿಂಗ್ ಪೌಡರ್
ಹಾಲು
ಚಿಟಿಕೆ ಉಪ್ಪು
3-ಬಾಳೆಹಣ್ಣು
1/4 ಕಪ್ ತೆಂಗಿನಕಾಯಿ ಹಾಲು
1 ಟೇಬಲ್ ಸ್ಪೂನ್ ಎಣ್ಣೆ
1 ಮೊಟ್ಟೆ.
ಬಾಳೆಹಣ್ಣನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇನ್ನೊಂದು ಬೌಲ್ ನಲ್ಲಿ ಮೊಟ್ಟೆ ಒಡೆದು ಚೆನ್ನಾಗಿ ಮಿಕ್ಸ್ ಮಾಡಿ, ಮೈದಾ ಹಿಟ್ಟಿಗೆ ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಹಾಕಿ. ನಂತರ ಮೊಟ್ಟೆ, ಎಣ್ಣೆ, ಹಾಲು, ತೆಂಗಿನ ಹಾಲು ಮತ್ತು ಬಾಳೆಹಣ್ಣು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ನಂತರ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದು ಸೌಟಿನ ಸಹಾಯದಿಂದ ತಯಾರಿಸಿದ ಹಿಟ್ಟನ್ನು ಹಾಕಿ. ದೋಸೆ ರೀತಿ ಮಾಡಿ. ನಂತರ ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಪ್ಯಾನ್ ಕೇಕ್ ರೆಡಿ.