ಪದಾರ್ಥಗಳು:
ಬಾರ್ಲಿ: 1/2 ಕಪ್
ಅಕ್ಕಿ: 1/4 ಕಪ್
ಹಾಲು: 2 ಕಪ್
ಸಕ್ಕರೆ: 1/4 ಕಪ್ ಅಥವಾ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ: 1/4 ಟೀಸ್ಪೂನ್
ಒಣದ್ರಾಕ್ಷಿ
ಕಾಯಿ ತುರಿ
ತುಪ್ಪ: 1 ಟೀಸ್ಪೂನ್
ವಿಧಾನ:
ಒಂದು ಪಾತ್ರೆಯಲ್ಲಿ ಬಾರ್ಲಿ ಮತ್ತು ಅಕ್ಕಿಯನ್ನು ತೆಗೆದುಕೊಂಡು, ಅದಕ್ಕೆ ಸಾಕಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಬಾರ್ಲಿ ಮತ್ತು ಅಕ್ಕಿ ಮೃದುವಾಗುವವರೆಗೆ ಬೇಯಿಸಿ. ಒಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ. ಕುದಿಯುತ್ತಿರುವ ಹಾಲಿಗೆ ಬೇಯಿಸಿದ ಬಾರ್ಲಿ ಮತ್ತು ಅಕ್ಕಿಯನ್ನು ಸೇರಿಸಿ. ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕೈಯಿಂದ ತಿರುವಿರಿ. ಪಾಯಸ ಒಂದು ಕುದಿಯುವ ಹಂತಕ್ಕೆ ಬಂದಾಗ, ಒಣದ್ರಾಕ್ಷಿ, ಬಾದಾಮಿ ಮತ್ತು ಕಾಯಿ ತುರಿಯನ್ನು ಸೇರಿಸಿ. ಕೊನೆಯದಾಗಿ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಾರ್ಲಿ ಅಕ್ಕಿ ಪಾಯಸವನ್ನು ಬಿಸಿಯಾಗಿಯೇ ಅಥವಾ ತಣ್ಣಗಾಗಿಸಿ ಸವಿಯಿರಿ.