October 16, 2026
Friday, October 16, 2026
spot_img

FOOD | ಬರೀ ಅನ್ನ ಸಾಂಬಾರ್ ಸಾಕಾಗಲ್ಲ, ಸೈಡ್ ಡಿಶ್ ಬೇಕಲ್ವಾ? ಅದಿಕ್ಕೆ ಈ ಎಗ್ ಬೋಂಡಾ ಟ್ರೈ ಮಾಡಿ

ಮಧ್ಯಾಹ್ನದ ಊಟದ ಜೊತೆಗೆ ಸವಿಯಲು ಸರಳವಾಗಿಯೂ, ರುಚಿಕರವಾಗಿಯೂ ಇರುವ ಸೈಡ್ ಡಿಶ್ ಬೇಕೆಂದರೆ ಮೊಟ್ಟೆ ಬೋಂಡಾ ಟ್ರೈ ಮಾಡಿ. ಗರಿಗರಿಯಾದ ಮೊಟ್ಟೆಯ ರುಚಿ ಅನ್ನ, ಸಾಂಬಾರ್ ಅಥವಾ ರಸಂ ಜೊತೆ ಸವಿಯಲು ಇನ್ನಷ್ಟು ರುಚಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಮೊಟ್ಟೆ – 4
ಕಡಲೆಹಿಟ್ಟು – 1/2 ಕಪ್
ಅಕ್ಕಿ ಹಿಟ್ಟು – 2 ಚಮಚ
ಖಾರದ ಪುಡಿ – 1/2 ಚಮಚ
ಗರಂ ಮಸಾಲೆ – 1/4 ಚಮಚ
ಓಮ (ಅಜ್ವೈನ್) – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಗರಂ ಮಸಾಲೆ, ಓಮ ಹಾಗೂ ಉಪ್ಪು ಸೇರಿಸಿ. ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಬೇಯಿಸಿದ ಮೊಟ್ಟೆಗಳ ಸಿಪ್ಪೆ ತೆಗೆದು ಅರ್ಧ ಭಾಗಗಳಾಗಿ ಕತ್ತರಿಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮೊಟ್ಟೆಯ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.

ಬಿಸಿಬಿಸಿಯಾದ ಮೊಟ್ಟೆ ಬೋಂಡಾವನ್ನು ಅನ್ನ, ಸಾಂಬಾರ್, ರಸಂ ಅಥವಾ ಚಟ್ನಿಯೊಂದಿಗೆ ಸೈಡ್ ಡಿಶ್ ಆಗಿ ಸವಿಯಿರಿ.

Must Read