ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಸ್ಲೈಸ್ – 4-6
ಮೊಟ್ಟೆ – 2
ಹಾಲು – 1/4 ಕಪ್
ಸಕ್ಕರೆ – 1 ಚಮಚ
ಚಕ್ಕೆ ಪುಡಿ
ಬೆಣ್ಣೆ ಅಥವಾ ಎಣ್ಣೆ
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಮೊಟ್ಟೆ, ಹಾಲು, ಸಕ್ಕರೆ ಮತ್ತು ಚಕ್ಕೆ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಒಂದು ನಾನ್-ಸ್ಟಿಕ್ ತವಾದಲ್ಲಿ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಪ್ರತಿ ಬ್ರೆಡ್ ಸ್ಲೈಸ್ ಅನ್ನು ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ. ಎರಡೂ ಕಡೆ ಚೆನ್ನಾಗಿ ಕೋಟ್ ಆಗಬೇಕು. ಆದರೆ ಜಾಸ್ತಿ ಹೊತ್ತು ಅದ್ದಬೇಡಿ, ಇಲ್ಲದಿದ್ದರೆ ಮೆತ್ತಗಾಗಿ ಬಿಡುತ್ತದೆ. ಮೊಟ್ಟೆಯ ಮಿಶ್ರಣದಲ್ಲಿ ಅದ್ದಿದ ಬ್ರೆಡ್ ಸ್ಲೈಸ್ ಗಳನ್ನು ಬಿಸಿಯಾದ ತವಾದಲ್ಲಿ ಹಾಕಿ. ಒಂದು ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ. ನಂತರ ತಿರುಗಿಸಿ ಇನ್ನೊಂದು ಕಡೆ ಬೇಯಿಸಿ. ಎರಡೂ ಕಡೆ ಚೆನ್ನಾಗಿ ಬೆಂದ ನಂತರ ತವದಿಂದ ತೆಗೆಯಿರಿ. ನಿಮ್ಮ ರುಚಿಯ ಪ್ರಕಾರ ಜೇನುತುಪ್ಪ, ಹಣ್ಣುಗಳು ಅಥವಾ ಪುಡಿ ಸಕ್ಕರೆಯೊಂದಿಗೆ ಬಿಸಿ ಬಿಸಿಯಾಗಿ ಫ್ರೆಂಚ್ ಟೋಸ್ಟ್ ಅನ್ನು ಸವಿಯಬಹುದು!