ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತ್ಯ ಜೇಬಿಗೆ ಕತ್ರಿ.. ಒಂದಲ್ಲ ಒಂದು ದರ ಏರಿಕೆಯಿಂದ ಕಂಗೆಟ್ಟಿದ್ದ ಜನಕ್ಕೆ ಇದೀಗ ಮತ್ತೊಂದು ಶಾಕ್. ಡೀಸೆಲ್ ದರ ಏರಿಕೆಯಾದ ಹಿನ್ನೆಲೆ ಈಗ ಖಾಸಗಿ ಬಸ್ ಪ್ರಯಾಣ ದರ ಕೂಡ ಹೆಚ್ಚಾಗಿದೆ.
ಡೀಸೆಲ್ ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ವಾಣಿಜ್ಯ ವಾಹನಗಳು ಹೋರಾಟ ನಡೆಸಲು ಮುಂದಾಗಿವೆ. ಏ.15ರಿಂದ ಮುಷ್ಕರಕ್ಕೂ ಮುಂದಾಗಿವೆ. ಈ ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರು ಕೂಡ ಇದೀಗ ಬೆಂಬಲ ಸೂಚಿಸಿದ್ದಾರೆ.
ಮುಷ್ಕರ ಆರಂಭವಾದ ದಿನದಿಂದಲೇ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಎಸಿ, ನಾನ್‌ಎಸಿ, ಸ್ಲೀಪರ್ ಬಸ್‌ಗಳಲ್ಲಿ 15%ರಷ್ಟು ದರ ಏರಿಕೆಯಾಗಲಿದೆ. ಎಲ್ಲಾ ದರ ಏರಿಕೆ ಕಾರಣ ದರ ಏರಿಕೆ ಮಾಡದೇ ಬೇರೆ ದಾರಿಯೇ ಇಲ್ಲ ಎಂಬ ನಿರ್ಧಾರಕ್ಕೆ ಖಾಸಗಿ ಬಸ್ ಮಾಲೀಕರು ಬಂದಿದ್ದಾರೆ.