September 30, 2026
Wednesday, September 30, 2026
spot_img

FOOD | ನಾರ್ತ್ ಇಂಡಿಯನ್ ಸ್ಟೈಲ್ ಮಟರ್ ಪನೀರ್! ಇದೊಂಥರಾ ಸ್ಪೆಷಲ್ ರೆಸಿಪಿ!

ಉತ್ತರ ಭಾರತೀಯ ಅಡುಗೆಗಳಲ್ಲಿನ ಜನಪ್ರಿಯ ಹಾಗೂ ಎಲ್ಲರಿಗೂ ಇಷ್ಟವಾಗುವ ಕರಿ ಎಂದರೆ ಅದು ಮಟರ್ ಪನೀರ್. ಮೃದುವಾದ ಪನೀರ್ ತುಂಡುಗಳು, ಹಸಿರು ಬಟಾಣಿ ಹಾಗೂ ರುಚಿಕರ ಮಸಾಲೆ ಸೇರಿಕೊಂಡಾಗ ಊಟಕ್ಕೆ ವಿಶೇಷ ರುಚಿ ಬರುತ್ತದೆ. ಮನೆಲ್ಲೇ ಸುಲಭವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಪನೀರ್ – 200 ಗ್ರಾಂ
ಹಸಿರು ಬಟಾಣಿ (ಮಟರ್) – 1 ಕಪ್
ಈರುಳ್ಳಿ – 2
ಟೊಮೆಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿಮೆಣಸು ಪೇಸ್ಟ್ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಲವಂಗ – 2
ಏಲಕ್ಕಿ – 1
ದಾಲ್ಚಿನ್ನಿ – ಸಣ್ಣ ತುಂಡು
ಅರಿಶಿನ ಪುಡಿ – ¼ ಟೀಸ್ಪೂನ್
ಖಾರದ ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – 1½ ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಫ್ರೆಶ್ ಕ್ರೀಮ್ – 2 ಟೇಬಲ್ ಸ್ಪೂನ್
ಎಣ್ಣೆ ಅಥವಾ ಬೆಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಕಡಾಯಿಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಹಾಕಿ ಸುಗಂಧ ಬರಲು ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಪೇಸ್ಟ್ ಸೇರಿಸಿ ಕಚ್ಚು ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಟೊಮೆಟೊ ಪೇಸ್ಟ್ ಹಾಕಿ ಎಣ್ಣೆ ಮೇಲಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಬೇಕು. ಈಗ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಹಾಗೂ ಉಪ್ಪು ಸೇರಿಸಿ ಮಸಾಲೆಗೆ ಹಾಕಿ. ನಂತರ ಹಸಿರು ಮಟರ್ ಹಾಕಿ ಸ್ವಲ್ಪ ನೀರು ಸೇರಿಸಿ 5–7 ನಿಮಿಷ ಬೇಯಿಸಿ.

ಮಟರ್ ಬೇಯಿದ ಮೇಲೆ ಪನೀರ್ ತುಂಡುಗಳನ್ನು ಸೇರಿಸಿ ನಿಧಾನವಾಗಿ ಕಲಸಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಫ್ರೆಶ್ ಕ್ರೀಮ್ ಸೇರಿಸಿ 2 ನಿಮಿಷ ಬಿಟ್ಟರೆ ಸಾಕು. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿ ಬಿಸಿ ಮಟರ್ ಪನೀರ್ ರೆಡಿ.

Must Read