ವಿಷಪೂರಿತ ಆಹಾರ ಸೇವನೆ 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಷಪೂರಿತ ಆಹಾರ ಸೇವನೆಯಿಂದ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು 18 ಮಂದಿ ಅಸ್ವಸ್ಥರಾಗಿರುವ ಘಟನೆ ಕೇರಳದ ಕರಿವಲ್ಲೂರ್‌ ಸಮೀಪ ನಡೆದಿದೆ. ಇಲ್ಲಿನ ಟ್ಯೂಷನ್‌ ಸೆಂಟರ್‌ ಬಳಿಯಿದ್ದ ಜ್ಯೂಸ್‌ ಸೆಂಟರ್‌ ಒಂದರಲ್ಲಿ ಬಾಲಕಿ ಶೆವರ್ಮಾ ಸೇವಿಸಿದ್ದಳು.

ಆದರೆ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದೇ ಅಂಗಡಿಯಲ್ಲಿ ಆಹಾರ ಸೇವಿಸಿದ ಇತರ 18 ಮಂದಿಯೂ ಕೂಡ ಅಸ್ವಸ್ಥರಾಗಿದ್ದು ಅವರನ್ನೂ ಕೂಡ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಪೈಕಿ ಎಲ್ಲರ ಅರೋಗ್ಯವೂ ಚೇತರಿಕೆಯಾಗುತ್ತಿದ್ದು ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಹೇಳಲಾಗಿದೆ.

ಜ್ಯೂಸ್‌ ಅಂಗಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೀಲ್‌ ಮಾಡಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!