ಪಂಜಾಬಿ ಸ್ಟೈಲ್ ಎಗ್ ಕರಿ ಮಾಡಲು ಸುಲಭವಾದ ಹಾಗೂ ರುಚಿಕರವಾದ ಪಾಕವಿಧಾನ ಇದಾಗಿದೆ. ಕಡಿಮೆ ಸಾಮಗ್ರಿಗಳಲ್ಲಿ ಸಿದ್ಧವಾಗುವ ಈ ಖಾದ್ಯವು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ.
ಬೇಕಾಗುವ ಪದಾರ್ಥಗಳು:
ಎಣ್ಣೆ , 2 ಚಮಚ
4 ಲವಂಗ
1 ಪಲಾವ್ ಎಲೆ
4 ಏಲಕ್ಕಿ ಕಾಳು
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಈರುಳ್ಳಿ (ನುಣ್ಣಗೆ ಕತ್ತರಿಸಿದ್ದು)
1 ಹಸಿರು ಮೆಣಸಿನಕಾಯಿ
4 ಚಮಚ ಪೇಸ್ಟ್
2 ಟೊಮ್ಯಾಟೊದ ಪ್ಯೂರಿ
1/2 ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1 ಟೀಚಮಚ ಕೊತ್ತಂಬರಿ ಪುಡಿ
1/4 ಟೀಚಮಚ ಗರಂ ಮಸಾಲ ಪುಡಿ
ನೀರು , ಅಗತ್ಯವಿರುವಂತೆ
4 ಬೇಯಿಸಿದ ಮೊಟ್ಟೆಗಳು ,
ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿದ್ದು
ಮಾಡುವ ವಿಧಾನ:
ಮೊದಲು ಮೊಟ್ಟೆಗಳನ್ನು ಬೇಯಿಸಿ ಇಟ್ಟುಕೊಳ್ಳಿ. ಈಗ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಲವಂಗ, ಪಲಾವ್ ಎಲೆ, ಏಲಕ್ಕಿ ಸೇರಿಸಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿ. ನಂತರ, ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಪೇಸ್ಟ್ ಸೇರಿಸಿ 3 ರಿಂದ 5 ನಿಮಿಷ ಬೇಯಲು ಬಿಡಿ.
ನಂತರ ಇದಕ್ಕೆ ಟೊಮೆಟೊ ಪ್ಯೂರಿ ಮತ್ತು ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ ಮತ್ತು ಅಗತ್ಯವಿರುವ ಉಪ್ಪು ಸೇರಿದಂತೆ ಎಲ್ಲಾ ಮಸಾಲೆಗಳನ್ನು ಸೇರಿಸಿ.
ಅರ್ಧ ಕಪ್ ನೀರು ಸೇರಿಸಿ ಮತ್ತು ಗ್ರೇವಿ ದಪ್ಪವಾಗುವವರೆಗೆ ಬೇಯಲು ಬಿಡಿ. 6 ನಿಮಿಷ ಬೆಂದ ನಂತರ, ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪಂಜಾಬಿ ಸ್ಟೈಲ್ ಎಗ್ ಕರಿ ರೆಡಿ.