ಚೀಸೀ ಸ್ಪಿನಾಚ್ ಓಪನ್ ಟೋಸ್ಟ್ ಅಥವಾ ಪಾಲಕ್ ಚೀಸ್ ಟೋಸ್ಟ್, ಪಾಲಕ್ ಮತ್ತು ಚೀಸ್ ನ ರುಚಿಕರವಾದ ಮಿಶ್ರಣವಾಗಿದ್ದು,ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರಿಗೂ ಇಷ್ಟವಾಗುವ ಈ ಟೋಸ್ಟ್ ಬ್ರಂಚ್ ಅಥವಾ ಸಂಜೆ ಚಹಾದ ಸಮಯದಲ್ಲಿ ತಿನ್ನಬಹುದು.
ಪದಾರ್ಥಗಳು
3 ಕಪ್ ಪಾಲಕ್ , ನುಣ್ಣಗೆ ಕತ್ತರಿಸಿದ್ದು
4 ಬೆಳ್ಳುಳ್ಳಿ ಎಸಳುಗಳು , ನುಣ್ಣಗೆ ಕತ್ತರಿಸಿದ್ದು
1/4 ಕಪ್ ಈರುಳ್ಳಿ , ನುಣ್ಣಗೆ ಕತ್ತರಿಸಿದ್ದು
2 ಚಮಚ ತಾಜಾ ಕ್ರೀಮ್
1/2 ಕಪ್ ಹಾಲು
2 ಟೀ ಚಮಚ ಕಾರ್ನ್‌ಫ್ಲೋರ್
1 ಚಮಚ ಬೆಣ್ಣೆ
ಚಿಲ್ಲಿ ಫ್ಲೇಕ್ಸ್ , ಅಗತ್ಯಕ್ಕೆ ತಕ್ಕಂತೆ
ಉಪ್ಪು , ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ , ರುಚಿಗೆ ತಕ್ಕಷ್ಟು
3/4 ಕಪ್ ಚೀಸ್
8 ಸ್ಲೈಸ್ ಬ್ರೆಡ್
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ,ಈರುಳ್ಳಿ ಸೇರಿಸಿ ಹುರಿಯಿರಿ. ನಂತರ, ಪಾಲಕ್ ಸೊಪ್ಪನ್ನು ಸೇರಿಸಿ 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ.
ಈಗ ಒಂದು ಬೌಲ್ ಗೆ ಹಾಲು ಮತ್ತು ಕಾರ್ನ್‌ಫ್ಲೋರ್ ಬೆರೆಸಿ ಪೇಸ್ಟ್ ಮಾಡಿಕೊಂಡು ಅದನ್ನು ಪಾಲಕ್ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ ಕುದಿಸಿ. ನಂತರ ಇದಕ್ಕೆ ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಜೊತೆಗೆ ಕ್ರೀಮ್ ಸೇರಿಸಿ ಮಿಶ್ರಣ ದಪ್ಪಗಾಗುವ ವರೆಗೆ ಬೇಯಿಸಿ.
ಈಗ ಬ್ರೆಡ್ ತುಂಡುಗಳ ಮೇಲೆ ಈ ಮಿಶ್ರಣವನ್ನು ಹರಡಿ ಪ್ಯಾನ್ ನಲ್ಲಿ ಬ್ರೆಡ್ ನ ಒಂದು ಬದಿ ಸ್ವಲ್ಪ ಫ್ರೈ ಮಾಡಿದರೆ ಚೀಸೀ ಸ್ಪಿನಾಚ್ ಓಪನ್ ಟೋಸ್ಟ್ ರೆಡಿ.