ಭಾರತ ಬಿಟ್ಟು ಹೋಗಲು ಇಂದೇ ಕೊನೆಯ ದಿನ: ಸ್ವದೇಶದತ್ತ ಹೊರಟ ಪಾಕ್ ಪ್ರಜೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ತಿರಿಸಿಕೊಳ್ಳಲು ಭಾರತದಲ್ಲಿ ವಾಸವಾಗಿರೋ ಪಾಕಿಸ್ತಾನಿಗಳು ವಾಪಸ್​ ಹೋಗುವಂತೆ 48 ಗಂಟೆಗಳ ಕಾಲ ಗುಡುವು ಕೊಟ್ಟಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಬಂದ್ ಮಾಡಲಾಗಿದೆ.

ಭಾರತದಲ್ಲಿ ನೆಲೆಸಿರೋ, ಸಾರ್ಕ್ ವೀಸಾದಡಿ ಬಂದಿದ್ದವರು ಪಾಕ್​ಗೆ ವಾಪಸ್ ಹೋಗಲು ಇಂದು ಕೊನೆಯ ದಿನವಾಗಿದೆ. ಮೆಡಿಕಲ್ ವೀಸಾದಲ್ಲಿ ಬಂದಿದ್ದವರು ಪಾಕ್​ಗೆ ವಾಪಸ್ ಹೋಗಲು ಏಪ್ರಿಲ್ 29 ಕೊನೆಯ ದಿನವಾಗಿದೆ. ಉಳಿದ ಎಲ್ಲ ಕೆಟಗರಿಯ ವೀಸಾದಲ್ಲಿ ಬಂದಿದ್ದವರು ಏಪ್ರಿಲ್ 27ರೊಳಗೆ ವಾಪಸ್ ಹೋಗಲೇಬೇಕು. ಒಂದು ವೇಳೆ ಪಾಕ್​ಗೆ ವಾಪಸ್ ಹೋಗದೇ ಇದ್ದರೇ, ಅಂಥವರು ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರು ಅಂತ ಪರಿಗಣನೆ ಮಾಡಲಾಗುತ್ತದೆ. ಅಂಥ ವಿದೇಶಿಯರ ವಿರುದ್ಧ ಹೊಸದಾಗಿ ಜಾರಿಗೆ ತಂದಿರುವ ಕಾಯ್ದೆಯಡಿ ಕ್ರಮಕ್ಕೆ ಮುಂದಾಗಲಿದ್ದಾರೆ.

ಪಾಕಿಸ್ತಾನಿ ಮಹಿಳೆಯರಾಗಿದ್ದು, ಭಾರತದ ನಾಗರಿಕರನ್ನು ಮದುವೆಯಾಗಿರುವವರಿಗೆ ಲಾಂಗ್ ಟರ್ಮ್ ವೀಸಾ ಭಾರತ ಮೂಲದ ಮಹಿಳೆಯಾಗಿದ್ದು, ಪಾಕ್ ನಾಗರಿಕರನ್ನು ಮದುವೆಯಾಗಿರುವವರು, ಬಳಿಕ ಭಾರತಕ್ಕೆ ವಾಪಸ್ ಆಗಿರುವವರಿಗೆ ಲಾಂಗ್ ಟರ್ಮ್ ವೀಸಾ ನೀಡಲಾಗುವುದು. ಹೀಗೆ ಲಾಂಗ್ ಟರ್ಮ್ ವೀಸಾ ಪಡೆದಿವವರು ಸದ್ಯ ಭಾರತದಲ್ಲಿ ವಾಸ ಮಾಡಲು ತೊಂದರೆ ಇಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!