April 27, 2026
Monday, April 27, 2026
spot_img

FOOD | ಮಧ್ಯಾಹ್ನ ಊಟಕ್ಕೆ ಟೇಸ್ಟಿ ಕಾಬೂಲ್ ಕಡ್ಲೆ ಬಿರಿಯಾನಿ ಮಾಡಿ

ಈ ದಿನದ ಊಟಕ್ಕೆ ಏನಾದರೂ ವಿಭಿನ್ನ, ರುಚಿಕರ ಮತ್ತು ಆರೋಗ್ಯಕರ ರೆಸಿಪಿ ಬೇಕೆಂದರೆ ಕಾಬೂಲ್ ಕಡ್ಲೆ ಬಿರಿಯಾನಿ ಟ್ರೈ ಮಾಡಿ. ಪ್ರೋಟೀನ್ ಸಮೃದ್ಧವಾಗಿರುವ ಈ ಬಿರಿಯಾನಿ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ರುಚಿಯಲ್ಲೂ ಸಖತ್ ಅನಿಸುತ್ತದೆ. ಲಂಚ್ ಬಾಕ್ಸ್‌ಗೂ ಇದು ಪರ್ಫೆಕ್ಟ್.

ಬೇಕಾಗುವ ಪದಾರ್ಥಗಳು:

ಒಂದು ಕಪ್ ಕಾಬೂಲ್ ಕಡ್ಲೆ, ಒಂದು ಕಪ್ ಬಸ್ಮತಿ ಅಕ್ಕಿ, 2 ಈರುಳ್ಳಿ, 1 ಟೊಮೆಟೊ, 2 ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲಾ, ಚಕ್ಕೆ, ಲವಂಗ, ಏಲಕ್ಕಿ, ತುಪ್ಪ/ಎಣ್ಣೆ, ಉಪ್ಪು.

ಮಾಡುವ ವಿಧಾನ:

ಮೊದಲು ಕಾಬೂಲ್ ಕಡ್ಲೆಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಕುಕ್ಕರ್‌ಗೆ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ ತಾಳಿಸಿ. ನಂತರ ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಟೊಮೆಟೊ, ಮಸಾಲೆ ಪುಡಿಗಳು, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಬೇಯಿಸಿದ ಕಾಬೂಲ್ ಕಡ್ಲೆ, ತೊಳೆದ ಅಕ್ಕಿ, ಪುದೀನಾ, ಕೊತ್ತಂಬರಿ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ 2 ವಿಶಲ್ ಕೂಗಿಸಿ. ಬಿಸಿ ಬಿಸಿ ಕಾಬೂಲ್ ಕಡ್ಲೆ ಬಿರಿಯಾನಿಯನ್ನು ರೈತಾ ಜೊತೆ ಸವಿದರೆ ರುಚಿ ಡಬಲ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !