August 16, 2026
Sunday, August 16, 2026
spot_img

FOOD | ಬಿಸಿ ಬಿಸಿ ಅನ್ನದ ಜೊತೆಗೆ ಈ ಹಾಗಲಕಾಯಿ ತೊಕ್ಕು ಇದ್ರೆ ಎರಡು ತುತ್ತು ಜಾಸ್ತಿನೇ ಹೋಗುತ್ತೆ

ಹಾಗಲಕಾಯಿ ತೊಕ್ಕು ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುವ ಸೈಡ್ ಡಿಶ್. ಕಹಿ ಕಡಿಮೆ ಮಾಡಿ, ಖಾರ-ಹುಳಿ-ಸಿಹಿ ರುಚಿಯಲ್ಲಿ ಈ ತೊಕ್ಕನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಹಾಗಲಕಾಯಿ – 2 (ಸಣ್ಣದಾಗಿ ಹೆಚ್ಚಿದ್ದು)
ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರದ್ದು
ಬೆಲ್ಲ – 2 ರಿಂದ 3 ಚಮಚ
ಎಣ್ಣೆ – 3 ರಿಂದ 4 ಚಮಚ
ಸಾಸಿವೆ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಇಂಗು – ಚಿಟಿಕೆ
ಅರಶಿನ – ಚಿಟಿಕೆ
ಖಾರದ ಪುಡಿ – 1 ರಿಂದ 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ, ಹೆಚ್ಚಿದ ಹಾಗಲಕಾಯಿ ತುಂಡುಗಳನ್ನು ಚೆನ್ನಾಗಿ ಹುರಿಯಿರಿ. ಕಂದು ಬಣ್ಣ ಬಂದು ಸ್ವಲ್ಪ ಕ್ರಿಸ್ಪಿ ಆದ ಮೇಲೆ ಬೇರೆ ಪಾತ್ರೆಗೆ ತೆಗೆದು ಇಡಿ. ಹೀಗೆ ಹುರಿದರೆ ಕಹಿ ಕಡಿಮೆಯಾಗುತ್ತದೆ.

ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ನಂತರ ದಪ್ಪನೆಯ ಹುಣಸೆ ರಸ ತೆಗೆದುಕೊಳ್ಳಿ.

ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಮತ್ತು ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಹುಣಸೆ ರಸ, ಖಾರದ ಪುಡಿ, ಅರಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ.

ಮಿಶ್ರಣ ಕುದಿಯಲು ಶುರುವಾದ ಬಳಿಕ ಹುರಿದ ಹಾಗಲಕಾಯಿ ಮತ್ತು ಬೆಲ್ಲ ಸೇರಿಸಿ. ನಿಧಾನ ಉರಿಯಲ್ಲಿ ಗಟ್ಟಿಯಾಗುವವರೆಗೆ ಬೇಯಿಸಿ. ಎಣ್ಣೆ ಬಿಡಲು ಆರಂಭಿಸಿದರೆ ರುಚಿಕರವಾದ ಹಾಗಲಕಾಯಿ ತೊಕ್ಕು ಸಿದ್ಧ. ಬಿಸಿ ಅನ್ನ, ಚಪಾತಿ ಅಥವಾ ದೋಸೆಯ ಜೊತೆ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !