ಬೇಕಾಗುವ ಸಾಮಗ್ರಿಗಳು:
ಪನ್ನೀರ್: 200 ಗ್ರಾಂ
ಸೌತೆಕಾಯಿ: 1
ಟೊಮ್ಯಾಟೊ: 1
ಈರುಳ್ಳಿ: 1
ಕೊತ್ತಂಬರಿ ಸೊಪ್ಪು
ನಿಂಬೆ ರಸ: 1 ಚಮಚ
ಚಾಟ್ ಮಸಾಲಾ: 1/2 ಚಮಚ
ಕಪ್ಪು ಉಪ್ಪು: ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ: ರುಚಿಗೆ ತಕ್ಕಷ್ಟು
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಪನ್ನೀರ್ ಅನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಪನ್ನೀರ್ ತುಂಡುಗಳನ್ನು ಸೇರಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಪನ್ನೀರ್ ಅನ್ನು ಒಂದು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಸೌತೆಕಾಯಿ, ಟೊಮ್ಯಾಟೊ, ಮತ್ತು ಈರುಳ್ಳಿಯನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ. ಒಂದು ದೊಡ್ಡ ಬಟ್ಟಲಿನಲ್ಲಿ ಕತ್ತರಿಸಿದ ಸೌತೆಕಾಯಿ, ಟೊಮ್ಯಾಟೊ, ಈರುಳ್ಳಿ ಮತ್ತು ಹುರಿದ ಪನ್ನೀರ್ ಸೇರಿಸಿ. ಇದಕ್ಕೆ ನಿಂಬೆ ರಸ, ಚಾಟ್ ಮಸಾಲಾ, ಉಪ್ಪು, ಮೆಣಸಿನ ಪುಡಿ ಸೇರಿಸಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಟೇಸ್ಟಿ ಪನ್ನೀರ್ ಸೌತೆಕಾಯಿ ಸಲಾಡ್ ಸವಿಯಲು ಸಿದ್ದ.