August 17, 2026
Monday, August 17, 2026
spot_img

FOOD | ಮನೆಯಲ್ಲೇ ರೆಸ್ಟೋರೆಂಟ್ ಸ್ಟೈಲ್ ಮಲೈ ಕೋಫ್ತಾ ಟ್ರೈ ಮಾಡಿ

ಮಲೈ ಕೋಫ್ತಾ ಉತ್ತರ ಭಾರತದ ಅತ್ಯಂತ ರುಚಿಕರ ಮತ್ತು ಶ್ರೀಮಂತ ಸಸ್ಯಾಹಾರಿ ಖಾದ್ಯಗಳಲ್ಲಿ ಒಂದು. ಮೃದುವಾದ ಪನೀರ್-ಆಲೂಗಡ್ಡೆ ಕೋಫ್ತಾಗಳನ್ನು ಕೆನೆಭರಿತ ಗ್ರೇವಿಯಲ್ಲಿ ಹಾಕಿ ತಯಾರಿಸುವ ಈ ಡಿಶ್ ರೊಟ್ಟಿ, ನಾನ್ ಮತ್ತು ಜೀರಿಗೆ ರೈಸ್ ಜೊತೆ ಸಖತ್ ರುಚಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

ಕೋಫ್ತಾಗೆ
1 ಕಪ್ ತುರಿದ ಪನೀರ್
2 ಬೇಯಿಸಿದ ಆಲೂಗಡ್ಡೆ
2 ಚಮಚ ಕಾರ್ನ್ ಫ್ಲೋರ್
1 ಚಮಚ ಗರಂ ಮಸಾಲಾ
ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ
ಉಪ್ಪು ಅಗತ್ಯಕ್ಕೆ ತಕ್ಕಷ್ಟು
ಕರಿಯಲು ಎಣ್ಣೆ

ಗ್ರೇವಿಗೆ
2 ಈರುಳ್ಳಿ
3 ಟೊಮ್ಯಾಟೊ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
10 ಗೋಡಂಬಿ
1/2 ಚಮಚ ಅರಿಶಿನ
1 ಚಮಚ ಖಾರದ ಪುಡಿ
1 ಚಮಚ ಧನಿಯಾ ಪುಡಿ
2 ಚಮಚ ತಾಜಾ ಕೆನೆ
1 ಚಮಚ ಕಸೂರಿ ಮೇಥಿ
ಬೆಣ್ಣೆ ಅಥವಾ ಎಣ್ಣೆ
ಚಕ್ಕೆ, ಲವಂಗ, ಏಲಕ್ಕಿ

ಮಾಡುವ ವಿಧಾನ

ಮೊದಲು ಪನೀರ್, ಮ್ಯಾಶ್ ಮಾಡಿದ ಆಲೂಗಡ್ಡೆ, ಕಾರ್ನ್ ಫ್ಲೋರ್, ಉಪ್ಪು ಮತ್ತು ಗರಂ ಮಸಾಲಾವನ್ನು ಚೆನ್ನಾಗಿ ಕಲಸಿ ಸಣ್ಣ ಉಂಡೆಗಳನ್ನು ತಯಾರಿಸಿ. ಬೇಕಾದರೆ ಒಳಗೆ ಗೋಡಂಬಿ ಮತ್ತು ಒಣದ್ರಾಕ್ಷಿ ಇಟ್ಟು ಉಂಡೆ ಮಾಡಿ. ನಂತರ ಎಣ್ಣೆಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ.

ಇನ್ನೊಂದು ಪಾತ್ರೆಯಲ್ಲಿ ಈರುಳ್ಳಿ, ಟೊಮ್ಯಾಟೊ, ಗೋಡಂಬಿ ಮತ್ತು ಶುಂಠಿ-ಬೆಳ್ಳುಳ್ಳಿಯನ್ನು ಬೇಯಿಸಿ ತಣ್ಣಗಾದ ಬಳಿಕ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಬೆಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ ಒಗ್ಗರಣೆ ನೀಡಿ. ಬಳಿಕ ತಯಾರಿಸಿದ ಪೇಸ್ಟ್ ಹಾಕಿ ಮಸಾಲಾ ಪುಡಿಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿ.

ಕೊನೆಯಲ್ಲಿ ಕೆನೆ ಮತ್ತು ಕಸೂರಿ ಮೇಥಿ ಹಾಕಿ ಕುದಿಸಿ. ಸರ್ವ್ ಮಾಡುವ ಮೊದಲು ಕರಿದ ಕೋಫ್ತಾಗಳನ್ನು ಗ್ರೇವಿಗೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !