July 12, 2026
Sunday, July 12, 2026
spot_img

FOOD | ಈ ರೀತಿ ಒಮ್ಮೆ ಚಿಕನ್ ಸುಕ್ಕ ಟ್ರೈ ಮಾಡಿ, ಮತ್ತೊಮ್ಮೆ ಹೇಳಿಸಿ ಮಾಡಿಸ್ತಾರೆ ನೋಡಿ

ವಾರಾಂತ್ಯದ ಭಾನುವಾರದ ಡಿನ್ನರ್‌ಗೆ ರುಚಿಕರವಾದ ಕರಾವಳಿ ಶೈಲಿಯ ಚಿಕನ್ ಸುಕ್ಕಾ ಟ್ರೈ ಮಾಡಿ. ಮಸಾಲೆಯ ಘಮ, ತೆಂಗಿನಕಾಯಿಯ ಸವಿ ಮತ್ತು ಚಿಕನ್‌ನ ಮೃದುವಾದ ರುಚಿ ಈ ಖಾದ್ಯವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ನೀರುದೋಸೆ, ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಸವಿದರೆ ರುಚಿ ಡಬಲ್!

ಬೇಕಾಗುವ ಸಾಮಗ್ರಿಗಳು:

500 ಗ್ರಾಂ ಚಿಕನ್
3 ಈರುಳ್ಳಿ, 1 ಟೊಮೆಟೊ
½ ಕಪ್ ತೆಂಗಿನಕಾಯಿ ತುರಿ
8–10 ಬ್ಯಾಡಗಿ ಮೆಣಸು
2 ಚಮಚ ಕೊತ್ತಂಬರಿ, 1 ಚಮಚ ಜೀರಿಗೆ
½ ಚಮಚ ಕಾಳುಮೆಣಸು
6–8 ಬೆಳ್ಳುಳ್ಳಿ, 1 ತುಂಡು ಶುಂಠಿ
4–5 ಲವಂಗ, 1 ಚಕ್ಕೆ
½ ಚಮಚ ಅರಿಶಿನ, ಉಪ್ಪು, 3 ಚಮಚ ಎಣ್ಣೆ

ಮಾಡುವ ವಿಧಾನ:

ಚಿಕನ್‌ಗೆ ಉಪ್ಪು, ಅರಿಶಿನ ಹಾಕಿ 15 ನಿಮಿಷ ಮ್ಯಾರಿನೇಟ್ ಮಾಡಿ.

ಮೆಣಸು, ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಲವಂಗ, ಚಕ್ಕೆ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹುರಿದು ನುಣ್ಣಗೆ ರುಬ್ಬಿಕೊಳ್ಳಿ.

ಎಣ್ಣೆಯಲ್ಲಿ ಈರುಳ್ಳಿ, ಟೊಮೆಟೊ ಬಾಡಿಸಿ, ಚಿಕನ್ ಸೇರಿಸಿ 5 ನಿಮಿಷ ಹುರಿಯಿರಿ.

ರುಬ್ಬಿದ ಮಸಾಲೆ ಸೇರಿಸಿ ಮುಚ್ಚಿ ಚಿಕನ್ ಚೆನ್ನಾಗಿ ಬೇಯಿಸಿ.

ಕೊನೆಯಲ್ಲಿ ತೆಂಗಿನಕಾಯಿ ತುರಿ ಸೇರಿಸಿ 2 ನಿಮಿಷ ಕಲಸಿ ಇಳಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !