ಜಮ್ಮು- ಕಾಶ್ಮೀರದದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು ಮತ್ತು ಕಾಶ್ಮೀರದ (Jammu And Kashmir) ಉಧಂಪುರದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು ೮೦ ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ವಿಭಾಗೀಯ ಆಯುಕ್ತ (ಜಮ್ಮು) ರಮೇಶ್ ಕುಮಾರ್, ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಓವರ್‌ಲೋಡ್‌ನಿಂದ ಸೇತುವೆ ಕುಸಿದಿದೆ.
ಪೊಲೀಸರು ಮತ್ತು ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
ಘಟನೆಯಲ್ಲಿ ೮೦ ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು ಮತ್ತು ಇತರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಎಸ್‌ಎಸ್‌ಪಿ ಉಧಂಪುರ ಡಾ.ವಿನೋದ್ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!