ಶ್ರದ್ಧಾ ಕೊಲೆ ಪ್ರಕರಣ: ಇದು ಲವ್‌ ಜಿಹಾದ್‌ ಅಲ್ಲ ಎಂದ ಅಸಾದುದ್ದೀನ್‌ ಓವೈಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರದ್ಧಾ ಕೊಲೆ ಪ್ರಕರಣವನ್ನು ಧಾರ್ಮಿಕ ಕೋನದಲ್ಲಿ ಬಿಜೆಪಿ ಬಿಂಬಿಸುತ್ತಿದೆ. ಆದರೆ ಇದು ʼಲವ್‌ ಜಿಹಾದ್‌ʼ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಇದು ಲವ್ ಜಿಹಾದ್‌ನ ಸಮಸ್ಯೆಯಲ್ಲ. ಮಹಿಳೆಯ ಮೇಲಿನ ಶೋಷಣೆ ಮತ್ತು ನಿಂದನೆಯ ವಿಷಯವಾಗಿದೆ. ಈ ದೃಷ್ಟಿಕೋನದಲ್ಲಿ ಪ್ರಕರಣವನ್ನು ನೋಡಬೇಕು ಮತ್ತು ಹತ್ಯೆಯನ್ನು ಖಂಡಿಸಬೇಕು ಎಂದು ಓವೈಸಿ ತಿಳಿಸಿದ್ದಾರೆ.

ಇದೇ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡಿರುವ ಅಜಂಗಢ ಘಟನೆಯನ್ನು ನೆನಪಿಸಿಕೊಂಡ ಓವೈಸಿ, ಇಂತಹ ಘಟನೆಗಳು ದುಃಖಕರವಾಗಿವೆ. ಇದನ್ನು ಹಿಂದೂ-ಮುಸ್ಲಿಂ ಕೋನದಲ್ಲಿ ರಾಜಕೀಯಗೊಳಿಸಬಾರದು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!