ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರ: ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ (encroachment) ತೆರವು ವಿಚಾರ ಮ ಕೈಗೊಳ್ಳದ ಬಿಬಿಎಂಪಿ (BBMP) ಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಜನರು ಸರಿಯಾದ ರಸ್ತೆ, ಫುಟ್‌ಪಾತ್ ನಿರ್ಮಿಸಲು ತೆರಿಗೆ ನೀಡುತ್ತಾರೆ . ಆದರೆ ರಸ್ತೆ, ಫುಟ್‌ಪಾತ್ ಸುಧಾರಿಸಲು ಬಿಬಿಎಂಪಿ ಮುಂದಾಗುತ್ತಿಲ್ಲ. ಒತ್ತುವರಿ ತೆರವಿಗೆ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸುತ್ತೇವೆ. ಕೆಲವರು ಫುಟ್‌ಪಾತ್‌ಗಳನ್ನು ಕಾರು ಪಾರ್ಕಿಂಗ್‌ಗಾಗಿ ಬಳಸುತ್ತಿದ್ದಾರೆ. ಎಲ್ಲಾ ಫುಟ್‌ಪಾತ್‌ಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್‌ನ ಹಂಗಾಮಿ ಸಿಜೆ‌ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರಿದ್ದ ಪೀಠದಿಂದ ಸೂಚನೆ ನೀಡಲಾಗಿದೆ.

ಇದರ ಜೊತೆಗೆ ಫೆ.1ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಖುದ್ದು ಹಾಜರಿಗೆ ಆದೇಶ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಾದ ಪಶ್ಚಿಮ, ಯಲಹಂಕ, ಆರ್.ಆರ್ ನಗರ ಮತ್ತು ದಕ್ಷಿಣ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೊತೆಗೆ ರಸ್ತೆ ಬಳಿ ನಿಲ್ಲಿಸಿದ್ದ ಬಿಡಿ ವಾಹನಗಳನ್ನು ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ತೆರವು ಮಾಡಿಸಿದ್ದರು.ಇದರ ವಿರುದ್ಧ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಸಂಘಟನೆ ಆಕ್ರೋಶ ಹೊರ ಹಾಕಿತ್ತು. ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರಿಗಳನ್ನ ಎತ್ತಂಗಡಿ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಎಫ್‌ಐ‌ಆರ್ ಹಾಕಬೇಕು ಎಂದು ಕಿಡಿಕಾರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!