ವಿಚಿತ್ರ ಕಾರಣಕ್ಕೆ ಊರಿಗೇ ಊರೇ ಲಾಕ್, ಕಿಮ್ ಜಾಂಗ್ ಉನ್ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರವಿಚಿತ್ರವಾದ ನಿರ್ಬಂಧವನ್ನು ಹೇರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಮತ್ತೊಂದು ವಿಚಿತ್ರ ನಿರ್ಬಂಧ ಹೇರಿದ್ದಾರೆ.
ಉತ್ತರ ಕೊರಿಯಾದ ಸೈನಿಕರ 653  ಬುಲೆಟ್‌ಗಳು ಕಳೆದುಹೋಗಿದ್ದು, ಅದು ಸಿಗುವವರೆಗೂ ಹೈಸನ್ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರಲಿದೆ.

ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರವನ್ನು ಲಾಕ್ ಮಾಡಿದ್ದು, ಮನೆ ಮನೆಗೂ ಭೇಟಿ ನೀಡಿ ಶೋಧ ಕಾರ್ಯ ಮಾಡಲಾಗುವುದು ಎಂದಿದ್ದಾರೆ. ಬುಲೆಟ್‌ಗಳು ಸಿಗುವವರೆಗೆ ಲಾಕ್‌ಡೌನ್ ಜಾರಿಯಲ್ಲಿರುವಂತೆ ಸೂಚನೆ ನೀಡಲಾಗಿದೆ. ಸೈನಿಕರು ಕಳೆದು ಹೋದ ಗುಂಡುಗಳನ್ನು ಹುಡುಕಲು ಯತ್ನಿಸಿದ್ದಾರೆ. ಆದರೆ ಅದು ಸಿಗದ ಕಾರಣ ಈ ವಿಚಿತ್ರ ನಿರ್ಬಂಧ ಹೇರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!