ಏರ್‌ಟೆಲ್ ಗ್ರಾಹಕರಿಗೂ ಗುಡ್ ನ್ಯೂಸ್ : 8 ನಗರಗಳಲ್ಲಿ 5G ಪ್ಲಸ್ ಸೇವೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏರ್‌ಟೆಲ್ ಗುರುವಾರ ಎಂಟು ನಗರಗಳಲ್ಲಿ 5G ಪ್ಲಸ್ ಸೇವೆಯನ್ನು ಪ್ರಾರಂಭಿಸಿದೆ. ಬಳಕೆದಾರರು ಈಗಾಗಲೇ ಇರುವ ಏರ್‌ಟೆಲ್ 4G ಸಿಮ್ ಮೂಲಕವೇ 5G ಸೇವೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಬೇರೆ ಸಿಮ್ ಕಾರ್ಡ್​ನನ್ನು ಬದಲಾಯಿಸುವ ಅಗತ್ಯವಿಲ್ಲ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಜನತೆ ಹಂತ ಹಂತವಾಗಿ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ.

5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಬಳಿ ಇರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್​​ ಸೇವೆ ಪಡೆಯಬಹುದಾಗಿದೆ. ವೇಗದ ಇಂಟರ್​ನೆಟ್5G ಹ್ಯಾಂಡ್‌ಸೆಟ್ ಮತ್ತು ಗ್ರಾಹಕರು ಈಗಾಗಲೇ ಹೊಂದಿರುವ ಸಿಮ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮತ್ತು ಪರಿಸರಕ್ಕೆ ಹಿತಕರವಾಗುವ ರೀತಿಯಲ್ಲಿ 5G ತರಲಾಗಿದೆ ಎಂದು ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!