ಭಾರತದ ಸ್ಪಿನರ್ ಗಳ ಬೌಲಿಂಗ್ ದಾಳಿಗೆ ಎಡವಿದ ವೆಸ್ಟ್​ ಇಂಡೀಸ್: ರೋಹಿತ್ ಪಡೆಯ ಗೆಲುವಿಗೆ 177 ರನ್​ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಸ್ಪಿನರ್ ಗಳ ಮಾರಕ ಬೌಲಿಂಗ್ ದಾಳಿಗೆ ಎಡವಿದ ವೆಸ್ಟ್​ ಇಂಡೀಸ್​ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 17೬ ರನ್​ಗಳಿಗೆ ಆಲ್ ಔಟ್ ಆಗಿವೆ.
ರೋಹಿತ್ ಶರ್ಮಾ ಮೊದಲ ನಾಯಕತ್ವದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಉತ್ತಮ ಪ್ರದರ್ಶನ ನೀಡಿತು.
ವೆಸ್ಟ್​ ಇಂಡೀಸ್ ಪರ ಜೇಸನ್ ಹೋಲ್ಡರ್​ ಮತ್ತು ಫ್ಯಾಬಿಯನ್​ ಅಲೆನ್ ​78 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಭಾರತದ ಪರ ಯುಜ್ವೇಂದ್ರ ಚಹಲ್​ 49ಕ್ಕೆ4, ವಾಷಿಂಗ್ಟನ್​ ಸುಂದರ್​ 30ಕ್ಕೆ 3, ಪ್ರಸಿಧ್ ಕೃಷ್ಣ 29ಕ್ಕೆ2 ಮತ್ತು ಸಿರಾಜ್​ 26ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!