ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಸುರಕ್ಷಿತ : 3ನೇ ಹಂತದ ಅಧ್ಯಯನ ವರದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊವ್ಯಾಕ್ಸಿನ್ ಎರಡರಿಂದ 18 ವರ್ಷಗಳ ನಡುವಣ ವಯೋಮಾನದ ಮಕ್ಕಳಿಗೆ ಸುರಕ್ಷಿತವಾಗಿದೆ ಎಂಬುದು ಮೂರನೇ ಹಂತದ ಅಧ್ಯಯನದಿಂದ ವ್ಯಕ್ತವಾಗಿರುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಇದೀಗ 50ಮಿ.ಡೋಸ್ ಕೊವ್ಯಾಕ್ಸಿನ್ ಲಸಿಕೆಗಳು ವಿತರಣೆಗೆ ಸಿದ್ಧಗೊಂಡಿರುವುದಾಗಿಯೂ ಅದು ತಿಳಿಸಿದೆ.
ತನ್ನ ಕೋವಿಡ್-19 ಲಸಿಕೆ ಮಕ್ಕಳು ಮತ್ತು ಹದಿಹರೆಯದವರಿಗೆ ಸುರಕ್ಷಿತ, ಉತ್ತಮ ಸಹನೀಯ ಮತ್ತು ಉನ್ನತ ಪ್ರತಿರೋಧಕ ಶಕ್ತಿಯನ್ನು ಬೆಳೆಸುತ್ತದೆ ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿ.ಶುಕ್ರವಾರ ತಿಳಿಸಿದೆ. ಎರಡು ಮತ್ತು ಮೂರನೇ ಬಹುಕೇಂದ್ರಿತ ಹಂತಗಳ ಅಧ್ಯಯನದಲ್ಲಿ 2 ರಿಂದ 18ರ ನಡುವಣ ವಯೋಮಾನದ ಮಕ್ಕಳನ್ನು ಒಳಪಡಿಸಲಾಗಿತ್ತು.ಈ ಸಂಬಂಧ ಅಧ್ಯಯನ ವರದಿಯನ್ನು ಲ್ಯಾನ್ಸೆಟ್ ಇನ್‌ಫೆಕ್ಷಿಯಸ್ ಡಿಸೀಸಸ್, ಪೀರ್ -ರಿವ್ಯೂಡ್‌ಹೈ ಇಂಪ್ಯಾಕ್ಟ್ ಫ್ಯಾಕ್ಟರ್ ಜರ್ನಲ್‌ಗಳು ಸ್ವೀಕರಿಸಿ ಪ್ರಕಟಿಸಿವೆ ಎಂದು ಕಂಪೆನಿ ತಿಳಿಸಿದೆ.
ಕ್ಲಿನಿಕಲ್ ಪ್ರಯೋಗ ಪರೀಕ್ಷೆಯಲ್ಲೂ ಮಕ್ಕಳಿಗೆ ಇದು ಸುರಕ್ಷಿತ ಮತ್ತು ಕಡಿಮೆ ಪ್ರತಿಕ್ರಿಯಾತ್ಮಕೆ ಹಾಗೂ ಪ್ರತಿರೋಧಕ ಶಕ್ತಿಯ ವೃದ್ಧಿಯಾಗುವುದು ಕಂಡುಬಂದಿದೆ. ಈ ಕುರಿತಂತೆ ಅಂಕಿ-ಅಂಶಗಳನ್ನು 2021ರ ಅಕ್ಟೋಬರ್‌ನಲ್ಲೇ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ(ಸಿಡಿಎಸ್‌ಸಿಒ)ಗೆ ಸಲ್ಲಿಸಲಾಗಿತ್ತು. ಅನಂತರ ಇದನ್ನು 6-18ರ ನಡುವಣ ಮಕ್ಕಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು ಎಂದು ಭಾರತ್‌ಬಯೋಟೆಕ್‌ನ ಅಧ್ಯಕ್ಷ ಹಾಗೂ ಎಂಡಿ ಕೃಷ್ಣಾ ಎಳ್ಳ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!