ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ  

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲಿಗೆ ಸಮೀಪದ  ಮೆಲ್ಕಾರ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ  ಇಬ್ಬರನ್ನು ಬಂಟ್ವಾಳನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಬಕ ಸಮೀಪದ ಪರನೀರು ಕಟ್ಟೆ ಮನೆ ನಿವಾಸಿ ಮಹಮ್ಮದ್ ರಫೀಕ್ ( 44) ಹಾಗೂ ಪುತ್ತೂರು ಕೆಮ್ಮಿಂಜ ಗ್ರಾಮದ ಮುಕ್ರಂಪಾಡಿ ನಿವಾಸಿ ತಾರಾನಾಥ ಪೂಜಾರಿ (27) ಹೆಸರಿಸಲಾಗಿದೆ. ಆರೋಪಿಗಳಿಂದ 7.500 ಮೌಲ್ಯದ 355 ಗ್ರಾಂ ಗಾಂಜಾ ವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎ.ಎಸ್.ಪಿ.ಶಿವಾಂಶು ರಜಪೂತ ಅವರ ನಿರ್ದೇಶನದಂತೆ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಮಾರ್ಗದರ್ಶನ ದಲ್ಲಿ ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಮತ್ತವರ ಸಿಬ್ಬಂದಿಗಳು   ಕಾರ್ಯಚರಣೆ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!