ಬಿಡಾಡಿ ನಾಯಿಗಳ ದಾಳಿಗೆ ಗೆ ಬಾಲಕ ಬಲಿ

ಹೊಸದಿಗಂತ ವರದಿ,ಧಾರವಾಡ:

ಬಿಡಾಡಿ ನಾಯಿಗಳ ದಾಳಿಯಿಂದ ಬಾಲನೋರ್ವ ಬಲಿಯಾದ ಘಟನೆ ನವಲೂರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮಾಳ ಗ್ರಾಮದ ಪ್ರಥಮ ನೀರಲಕಟ್ಟಿ (11) ಬಿಡಾಡಿ ನಾಯಿಗೆ ಬಲಿಯಾದ ಬಾಲಕ.
ವಾಚಮನ ಕೆಲಸದಲ್ಲಿದ್ದ ತಂದೆಗೆ ಊಟ ಕೊಡಲು ಹೋದಾಗ ಬಾಲಕನ ಮೇಲೆ ಎಂಟತ್ತು ಬಿಡಾಡಿ ನಾಯಿಗಳು ದಾಳಿ ಮಾಡಿವೆ.
ದಾಳಿಗೆ ಗಾಬರಿಗೊಂಡ ಬಾಲಕ ಸಾಕಷ್ಟು ಕಿರುಚಿಸಿದ ಶಬ್ಧ ಕೇಳಿ ಸಹಾಯಕ್ಕೆ ಬಂದ ಸ್ಥಳೀಯರನ್ನು ಕಂಡು ನಾಯಿಗಳು ಬಿಟ್ಟುಹೋಗಿವೆ.
ನಾಯಿಗಳ ದಾಳಿಗೆ ಗಂಭೀರ ಗಾಯಗೊಂಡ ಬಾಲಕನಿಗೆ ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿತ್ತು. ಚಿಕಿತ್ಸೆ ಫಲಿಸಿದೆ ಅಸುನೀಗಿದ್ದಾನೆ.
ನವಲೂರು ಗ್ರಾಮದಲ್ಲಿ ನಾಯಿಗಳ ದಾಳಿಗೆ ಬಲಿಯಾದ ಮೂರನೇ ಪ್ರಕರಣವಿದೆ. ಪಾಲಿಕೆಯ ನಿರ್ಲಕ್ಷö್ಯದಿಂದ ಮತ್ತೊಂದು ಅಮಾಯಕ ಕಂದಮ್ಮ ಬಲಿಯಾಗಿದೆ.
ಬಾಲಕನ ಮರಣಕ್ಕೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನೇರ ಹೊಣೆಗಾರರು ಎಂದು ನವಲೂರು ಗ್ರಾಮಸ್ಥರ ಗಂಭೀರ ಆರೋಪ ಮಾಡಿದ್ದಾರೆ.
ತಕ್ಷಣವೇ ಮಹಾನಗರ ಪಾಲಿಕೆ ಬಿಡಾಡಿ ನಾಯಿಗಳ ಹಿಡಿದು ಊರ ಹೊರಗೆ ಹಾಕುವ ಕೆಲಸ ಮಾಡಿದಾಗ ಮಾತ್ರವೇ ಮಕ್ಕಳ ಜೀವ ಉಳಿಸಲು ಸಾಧ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!