ಭಾರತದ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ಪೂರೈಸಿದ ಯುಎಇ ವಾಯುಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ವಾಯುಪಡೆಯ ಮತ್ತೊಂದು ವಿಮಾನದಿಂದ ಇಂಧನ ಪೂರೈಕೆ ಮಾಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕೆ ಈಜಿಪ್ಟ್‌ಗೆ ತೆರಳುವಾಗ ಈ ವಿದ್ಯಮಾನ ನಡೆದಿದೆ. ಸುಮಾರು 6 ಗಂಟೆಗಳ ತಡೆರಹಿತ ಹಾರಾಟಕ್ಕಾಗಿ ಸುಖೋಯ್ ಸು-30 ಎಂಕೆಐ ಫೈಟರ್‌ಜೆಟ್‌ಗಳಿಗೆ ಯುಎಇ ವಾಯು ಪಡೆಯ ಎಂಆರ್​ಟಿಟಿ ವಿಮಾನ ಇಂಧನ ಸರಬರಾಜು ಮಾಡಿತು.
ಈ ವಿಮಾನ ಇಂಧನ ತುಂಬುವಿಕೆ ಕಾರ್ಯವನ್ನು ಭಾರತೀಯ ವಾಯುಪಡೆಯು ಮುಕ್ತವಾಗಿ ಪ್ರಶಂಸಿಸುತ್ತದೆ ಎಂದು ಐಎಎಫ್​ ಟ್ವೀಟ್​ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!