ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದ ಮಹಿಳೆಯ ಅಡ್ಡಗಟ್ಟಿ ಸರ ಅಪಹರಣ

ಹೊಸದಿಗಂತ ವರದಿ, ಮದ್ದೂರು :

ಬೈಕ್‌ನಲ್ಲಿ ಬಂದ ಅಪರಿಚಿತ ಯುವಕನೋರ್ವ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದ ಗೃಹಿಣಿಯನ್ನು ಅಡ್ಡಗಟ್ಟಿ ಲಕ್ಷಾಂತರ ರೂ. ವೌಲ್ಯದ ಮಾಂಗಲ್ಯ ಸರವನ್ನು ಲೂಟಿ ಮಾಡಿರುವ ಘಟನೆ ತಾಲೂಕಿನ ಸಾದೊಳಲು ಗ್ರಾಮದ ಸಮೀಪ ಗುರುವಾರ ಮುಂಜಾನೆ ಜರುಗಿದೆ.
ಮಂಡ್ಯ ತಾಲೂಕು, ಕನ್ನಲಿ ಗ್ರಾಮದ ಚೆನ್ನಪ್ಪನ ಪತ್ನಿ ಸುವರ್ಣ ಎಂಬುವರ ಕತ್ತಿನಲ್ಲಿದ್ದ 1.40 ಲಕ್ಷ ರೂ. ವೌಲ್ಯದ 28 ಗ್ರಾಂ. ಮಾಂಗಲ್ಯ ಸರವನ್ನು ಅಪರಿಚಿತ ವ್ಯಕ್ತಿ ಅಪಹರಿಸಿ ಪರಾರಿಯಾಗಿದ್ದಾನೆ.
ಮೂಲತಃ ಮಂಡ್ಯ ತಾಲೂಕು ಬೇಲೂರು ಗ್ರಾಮದವರಾದ ಸುವರ್ಣ ಹಾಲಿ ಕನ್ನಲಿ ಗ್ರಾಮದಲ್ಲಿ ವಾಸವಾಗಿದ್ದು, ರಾಮನಗರ ಜಿಲ್ಲೆ ಬಿಡದಿಯ ಕಲ್ಪನ್ ವೆಂಚೂರ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಲಿ ಗ್ರಾಮದಿಂದ ಸಾದೊಳಲು ಮಾರ್ಗವಾಗಿ ಗೆಜ್ಜಲಗೆರೆ ಗ್ರಾಮಕ್ಕೆ ಬಂದು ಪ್ರತಿನಿತ್ಯ ಬಸ್‌ನಲ್ಲಿ ಬಿಡದಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದರು. ಬೆಳಗ್ಗೆ 6.20ರ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಸುವರ್ಣರನ್ನು ಅಡ್ಡಗಟ್ಟಿ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡು ಆರೋಪಿಗಾಗಿ ಶೋಧ ಕಾರ‌್ಯ ನಡೆಸಿದ್ದಾರೆ.
ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಠಾಣೆ ವ್ಯಾಪ್ತಿಯಲ್ಲಿ 17 ಸರಗಳ್ಳತನ ಪ್ರಕರಣ ದಾಖಲಾಗಿವೆ. ಇದರಲ್ಲಿ ನಾಲ್ಕೈದು ಪ್ರಕರಣ ಬಿಟ್ಟರೆ ಉಳಿದ ಯಾವುದೇ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!