500 ರೂ. ನೀಡಿದರೆ ಒಂದು ರಾತ್ರಿ ಜೈಲಲ್ಲಿ ಕಳೆಯಲು ಅವಕಾಶ! ಉತ್ತರಾಖಂಡ್ ಜೈಲಿಂದ‌ ವಿಶೇಷ ಆಫರ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೀವು ಈ ವರೆಗೆ ಹಲವಾರು ಆಕರ್ಷಕ ಆಫರ್‌ ಗಳನ್ನು ಗಮನಿಸಿರಬಹುದು. ಆದರೆ ಉತ್ತರಖಂಡ್‌ ನ ಜೈಲೊಂದು ನೀಡಿರುವ ವಿಚಿತ್ರ ಆಫರ್‌ ಗಮನಿಸಿದ ಕೆಲವರು ಕಕ್ಕಾಬಿಕ್ಕಿಯಾಗಬಹುದು. ಜೈಲುವಾಸವೆಂದರೆ ಬಹುತೇಕರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಹಾಗಿರುವಾಗ ಬನ್ನಿ., ಜೈಲು ಸೇರಿ.. ಎಂದು ಆಫರ್‌ ಕೊಟ್ಟರೆ ಹೇಗಿರುತ್ತದೆ ಅಲ್ಲವೇ!. ಕೇವಲ 500 ರೂ. ಕೊಟ್ಟರೆ ಸಾಕು ಒಂದು ರಾತ್ರಿ ಜೈಲಿನಲ್ಲಿ ಕೈದಿಗಳಂತೆ ಇರಲು ಅವಕಾಶ ನೀಡುವುದಾಗಿ ಉತ್ತರಾಖಂಡದ ಹಲ್ದ್ವಾನಿ ಜೈಲು ವಿಶಿಷ್ಟ ಆಫರ್ ನೀಡಿದೆ.
ಕೆಲವರಿಗೆ ಯಾರೂ ಬಯಸದ ಸನ್ನಿವೇಶಗಳನ್ನು ಅನುಭವಿಸುವ ಖಯಾಲಿ ಇರುತ್ತದೆ. ಇನ್ನೂ ಕೆಲವರನ್ನು ಜ್ಯೋತಿಷಿಗಳು ʼನಿಮಗೆ ಬಂಧನ ಯೋಗವಿದೆʼ ಎಂದು ಹಲವಾರು ಬಾರಿ ಎಚ್ಚರಿಸುತ್ತಿರುತ್ತಾರೆ. ಅಂತಹವರಿಗಾಗಿ ಈ ವಿಶೇಷ ಆಫರ್‌ ನೀಡಲಾಗಿದೆ. ಪ್ರವಾಸಿಗರು ರಾತ್ರಿ 500 ರೂಪಾಯಿ ಖರ್ಚು ಮಾಡುವ ಮೂಲಕ ‘ನಿಜವಾದ ಜೈಲು’ ಶಿಕ್ಷೆಯನ್ನು ಇಲ್ಲಿ ಅನುಭವಿಸಬಹುದಾಗಿದೆ.
ಜೈಲಿನ ಈ ಆಫರ್‌ ಅನ್ನು ಜ್ಯೋತಿಷಿಗಳು ನಿಜವಾಗಿಯೂ ಮೆಚ್ಚಿಕೊಂಡಿದ್ದಾರೆ. ಏಕೆಂದರೆ ಕೆಲವು ಜನರಿಗೆ ‘ಬಂಧನ್ ಯೋಗ’ವನ್ನು ನಿವಾರಿಸಲು ಜೈಲಿನಲ್ಲಿ ಕೆಲವು ಸಮಯ ಕಳೆಯಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಈ ರೀತಿ ಹೇಳಿಸಿಕೊಂಡ ವ್ಯಕ್ತಿಯು ಭವಿಷ್ಯದಲ್ಲಿ ಒಂದು ದಿನ ಸೆರೆವಾಸಕ್ಕೆ ಒಳಗಾಗುವುದು ಶತಸಿದ್ಧ ಜ್ಯೋತಿಷಿಗಳ ಭವಿಷ್ಯ ನಿರ್ದೇಶಿಸಿರುತ್ತದೆ. ಬಂಧನ ಭೀತಿಯಲ್ಲೇ ಜೀವನ ಕಳೆಯುತ್ತಿರುವ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಜೈಲಲ್ಲಿ ಒಂದು ರಾತ್ರಿಯನ್ನು ಕೈದಿಯಂತೆ ಕಳೆದು ತಮ್ಮ ʼಕೆಟ್ಟ ದೋಷಗಳನ್ನುʼ ನಿವಾರಿಸಿಕೊಂದು ನಿರಾಳರಾಗಲು ಸಹಾಯಕವಾಗಲಿದೆ ಎನ್ನುತ್ತಿದ್ದಾರೆ.
1903 ರಲ್ಲಿ ನಿರ್ಮಿಸಲಾದ ಹಲ್ದ್ವಾನಿ ಜೈಲು ಈಗ 100 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅದರ ಕಟ್ಟಡದ ಒಂದು ಭಾಗವನ್ನು ಅತಿಥಿಗಳು ಮತ್ತು ಪ್ರವಾಸಿಗರ ಸ್ವಾಗತಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಈ ವಿಭಾಗವು ಆರು ಸಿಬ್ಬಂದಿ ಕ್ವಾರ್ಟರ್ಸ್ ಹೊಂದಿರುವ ಹಳೆಯ ಶಸ್ತ್ರಾಗಾರವನ್ನು ಒಳಗೊಂಡಿದೆ, ಇವೆಲ್ಲವನ್ನೂ ದೀರ್ಘಕಾಲದಿಂದ ಸುಸ್ಥಿತಿಯಲ್ಲಿಡಲಾಗಿದೆ.
‘ಪ್ರವಾಸಿ ಕೈದಿಗಳಿಗೆ’ ಒಂದು ರಾತ್ರಿಯನ್ನು ಜೈಲಿನಲ್ಲಿ ಕಳೆಯಲು ಜೈಲಿನಿಂದ ಆಹಾರ ಮತ್ತು ಜೈಲು ಸಮವಸ್ತ್ರವನ್ನು ಒದಗಿಸಲಾಗುತ್ತದೆ. ₹ 500 ಶುಲ್ಕಕ್ಕೆ ಒಂದು ರಾತ್ರಿ ಕಳೆಯಬಹುದು ”ಎಂದು ಜೈಲು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!