Sunday, December 4, 2022

Latest Posts

ವೈರಲ್ ಆಗುತ್ತಿದೆ ವೈದ್ಯರು ಬರೆದುಕೊಟ್ಟ ಔಷಧ ಚೀಟಿ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ವೈದ್ಯರು ಚೀಟಿ ಮೇಲೆ ನಾಲ್ಕು ಗೆರೆ ಎಳೆದರೂ ಸಾಕು, ಮೆಡಿಕಲ್ಸ್‌ನವರಿಗೆ ಅದು ಯಾವ ಮಾತ್ರೆ ಅನ್ನೋದು ಗೊತ್ತಾಗಿಬಿಡುತ್ತದೆ. ಏಕೆಂದರೆ ವೈದ್ಯರ ಅಕ್ಷರ ಅರ್ಥ ಆಗೋದು ಕಷ್ಟಸಾಧ್ಯ. ವೈದ್ಯರು ಹೇಳಿರುವ ಮಾತ್ರೆಯನ್ನೇ ಕೊಟ್ಟಿದ್ದಾರಾ ಅಥವಾ ಮಿಸ್ ಆಗಿದೆಯಾ ಎಂದು ನೋಡಿಕೊಳ್ಳೋದಕ್ಕೂ ನಮಗೆ ಅವರ ಅಕ್ಷರಗಳು ಅರ್ಥವಾಗೋದಿಲ್ಲ. ಆದರೆ ಕೇರಳದ ಈ  ವೈದ್ಯರ ಅಕ್ಷರಗಳನ್ನೊಮ್ಮೆ ಗಮನ ಕೊಟ್ಟು ನೋಡಿ..

ವೈರಲ್ ಆಗುತ್ತಿದೆ ವೈದ್ಯರು ಬರೆದುಕೊಟ್ಟ ಔಷಧ ಚೀಟಿ, ಯಾಕೆ ಗೊತ್ತಾ?

ಸುಂದರವಾಗಿ, ಬಿಡಿಬಿಡಿಯಾದ ಅಕ್ಷರಗಳಲ್ಲಿ ಚೀಟಿ ಬರೆದು ಕೊಟ್ಟಿದ್ದಾರೆ. ಕೇರಳದ ಡಾ. ನಿತಿನ್ ನಾರಾಯಣ್ ಅವರ ಅಕ್ಷರಗಳಿವು. ನಿತಿನ್ ಅವರ ಸಹೋದರಿ ನಾಲ್ಕು ಗೆರೆಯ ನೋಟ್‌ಬುಕ್‌ನಲ್ಲಿ ಬರೆಸಿ ಬರೆಸಿ ಅಕ್ಷರ ಈ ರೀತಿ ಆಗುವಂತೆ ಮಾಡಿದ್ದಾರಂತೆ. ಈ ಚೀಟಿ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಎಲ್ಲ ವೈದ್ಯರ ಅಕ್ಷರಗಳೂ ಹೀಗೆ ಇರಬೇಕಿತ್ತು ಎಂದು ಜನ ಹೇಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!