Wednesday, June 29, 2022

Latest Posts

ಸಿಎಂ ಕಾರಿಗೆ ಮುತ್ತಿಗೆಗೆ ಯತ್ನ: 50ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರ ಬಂಧನ

 ಹೊಸ ದಿಗಂತ ವರದಿ, ಕಲಬುರಗಿ:

ಪ್ರಸ್ತುತ ರಾಜ್ಯದಲ್ಲಿ ಕೋಲಾಹಲ ಉಂಟುಮಾಡಿರುವ ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣದ ಬಿಸಿಯೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ತಟ್ಟಿದ್ದು, ಕಲಬುರಗಿ ಪ್ರವಾಸಕ್ಕೆಂದು ಬಂದ ಸನ್ನಿವೇಶದಲ್ಲಿ ಅವರ ವಾಹನಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ.

ಮುತ್ತಿಗೆ ವೇಳೆಯಲ್ಲಿ 50 ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರು, ಪಿಎಸ್​ಐ ನೇಮಕಾತಿ ಮರು ಪರೀಕ್ಷೆ ನಡೆಸಬೇಕು. ಕೂಡಲೇ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್​ನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss