ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 11 ಶುರುವಾಗಲಿದ್ದು, ಸ್ಪರ್ಧಿಗಳು ಯಾರೆಲ್ಲಾ ಇರಬಹುದು ಎನ್ನುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಈ ಮಧ್ಯೆ ಬಿಗ್‌ಬಾಸ್ ಟೀಂ ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋದಕ್ಕೂ ಮುನ್ನವೇ ಕಂಟೆಸ್ಟೆಂಟ್ಸ್ ಯಾರು ಎನ್ನುವ ವಿಷಯ ಲೀಕ್ ಆಗಲಿದೆ. ಅದರಲ್ಲಿಯೂ ಟಾಪ್ ಐದು ಸ್ಪರ್ಧಿಗಳು ಯಾರು ಎನ್ನುವ ಮಾಹಿತಿ ದೊರೆಯಲಿದೆ.
ರಾಜರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಈ ಐವರು ಸ್ಪರ್ಧಿಗಳು ಯಾರು ಅನ್ನೋದು ರಿವೀಲ್ ಆಗಿದೆ. ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಎರಡು ಕಾನ್ಸೆಪ್ಟ್ ಇದ್ದು, ಯಾರು ಸ್ವರ್ಗಕ್ಕೆ ಹೋಗ್ತಾರೆ ಅಥವಾ ಯಾರು ನರಕಕ್ಕೆ ಹೋಗ್ತಾರೆ ಅನ್ನೋದನ್ನು ಜನರೇ ತೀರ್ಮಾನ ಮಾಡಲಿದ್ದಾರೆ.