56 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಶಿವಸೈನಿಕರಲ್ಲಿ ಬಿರುಕು: ಗುರು ಪೂರ್ಣಿಮೆ ಸಂಭ್ರಮ ಕಸಿದುಗೊಂಡ ‘ಸಿಎಂ’ ಪಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದಲ್ಲಿ 56 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಬಿರುಕು ಬಿಟ್ಟಿದೆ. ಬಣ ರಾಜಕೀಯ ಶಿವಸೈನಿಕರ ಗುರು ಪೂರ್ಣಿಮೆಯ ಸಂಭ್ರಮವನ್ನೂ ಕಸಿದುಕೊಂಡಿದೆ.
ಹೌದು, ಪ್ರತಿ ವರ್ಷ ಗುರುಪೂರ್ಣಿಮೆಯಂದು ಸಾವಿರಾರು ಶಿವಸೈನಿಕರು ಬಾಳಾಸಾಹೇಬ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ಅಲ್ಲದೇ, ಬಾಳಾಸಾಹೇಬ್ ಠಾಕ್ರೆ ನಿವಾಸವಾಗಿದ್ದ ಈಗ ಉದ್ಧವ್​ ಠಾಕ್ರೆ ವಾಸಿಸಿರುವ ‘ಮಾತೋಶ್ರೀ’ಗೆ ದೇವಸ್ಥಾನ ಎಂಬ ಭಾವನೆಯಲ್ಲೇ ಭೇಟಿ ನೀಡುತ್ತಿದ್ದರು. ಆದರೆ, ಈ ಬರಿ
ತನ್ನದೇ ಆದ ಪ್ರಾಬಲ್ಯ ಮತ್ತು ವರ್ಚಸ್ಸು ಹೊಂದಿರುವ ಶಿವಸೇನೆ ಇದೀಗ ಎರಡು ಬಣಗಳಾಗಿ ಬೇರ್ಪಟ್ಟಿದೆ.ರಾಜಕೀಯದ ಪರಿಣಾಮ ಶಿವಸೇನೆಯಲ್ಲಿ ದೊಡ್ಡ ಒಡಕು ಉಂಟಾಗಿದೆ. ಅರ್ಧದಷ್ಟು ಹಾಲಿ ಶಾಸಕರು ಪಕ್ಷದ ವಿರುದ್ಧವೇ ಸೆಟೆದೆದ್ದು ನಿಂತು ‘ಮಾತೋಶ್ರೀ’ಯತ್ತ ಮುಖ ಮಾಡಿಲ್ಲ.

ಬದಲಿಗೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿ ಮುಖ್ಯಮಂತ್ರಿ ಗದ್ದುಗೆ ಏರಿರುವ ಏಕನಾಥ್ ಶಿಂಧೆ ಮತ್ತು ಅವರ ಗುಂಪು ದಾದರ್‌ನಲ್ಲಿರುವ ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ ಗುರುಪೂರ್ಣಿಮೆ ನಿಮಿತ್ತ ಗೌರವ ಸಲ್ಲಿಸಿದ್ದಾರೆ.

ಇತ್ತ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸುವ ಶಾಸಕರು ಪ್ರತ್ಯೇಕವಾಗಿ ಬಾಳಾಸಾಹೇಬ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ ‘ಮಾತೋಶ್ರೀ’ಗೆ ತೆರಳಿ ಉದ್ಧವ್ ಠಾಕ್ರೆ ಅವರಿಗೆ ಶುಭಾಶಯ ಕೋರಿದರು. ಆದರೆ, ಏಕನಾಥ್ ಶಿಂಧೆ ಗುಂಪಿನ ಯಾವೊಬ್ಬ ಬಂಡಾಯ ಶಾಸಕ ಕೂಡ ‘ಮಾತೋಶ್ರೀ’ ಕಡೆ ತಲೆ ಹಾಕಲಿಲ್ಲ.

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಎರಡೂ ಸಮಾನಾರ್ಥಕ ಪದಗಳು. ಬಾಳಾಸಾಹೇಬ್ ಠಾಕ್ರೆ ಮರಾಠಿ ಪ್ರೇಮ ಮತ್ತು ಹಿಂದುತ್ವದ ಸಿದ್ಧಾಂತ ಮಹಾರಾಷ್ಟ್ರದ ರಾಜಕೀಯದಲ್ಲಿ ಬಾಳಾಸಾಹೇಬರ ಸ್ಥಾನ ಬೆಳೆಯುತ್ತಲೇ ಇತ್ತು. ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ದೊಡ್ಡ ಅಭಿಮಾನಿಗಳ ಬಳಗ ಇದೆ. ಅನೇಕ ಕಟ್ಟಾ ಶಿವಸೈನಿಕರು ಮತ್ತು ಬಾಳಾಸಾಹೇಬರ ಅಪ್ಪಟ ಭಕ್ತರು ಕೂಡ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!