ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಹ ದುರ್ಗಂಧ ಸಮಸ್ಯೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳು ಕೆಲ ಸಲಹೆಗಳನ್ನು ಪಾಲಿಸಿ..
ಸ್ವಚ್ಛವಾಗಿರಿ- ಹವಾಮಾನಕ್ಕೆ ಅನುಗುಣವಾಗಿ ದಿನಕ್ಕೆ ಒಮ್ಮೆಯಾದರೂ ಸ್ನಾನ ಮಾಡಿ. ಹೆಚ್ಚು ಬೆವರುವುದರಿಂದ ದೇಹದಿಂದ ಕೆಟ್ಟ ವಾಸನೆ ಬರುತ್ತದೆ. ಸ್ನಾನದ ವೇಳೆ ಆಂಟಿಬ್ಯಾಕ್ಟೀರಿಯಲ್ ಸೋಪ್ ಬಳಸಿ. ಸ್ನಾನದ ನಂತರ ಸ್ವಚ್ಛವಾದ ಒಣ ಟವೆಲ್ನಿಂದ ಒರೆಸಿ.
ವಿಶೇಷ ತೈಲಗಳು- ಸ್ನಾನದ ನೀರಿನಲ್ಲಿ ಎರಡರಿಂದ ಮೂರು ಹನಿ ಲ್ಯಾವೆಂಡರ್, ರೋಸ್ಮರಿ ಮತ್ತು ಟಿಟ್ರಿಯಂತಹ ಸಾಂದ್ರೀಕೃತ ತೈಲಗಳು ದೇಹದಿಂದ ವಾಸನೆಯನ್ನು ತೆಗೆದುಹಾಕುತ್ತದೆ.
ಬೇವು, ಟೊಮೆಟೊ ಮಿಶ್ರಣ- ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು (ಸೂಕ್ಷ್ಮಜೀವಿಗಳು) ತೊಡೆದುಹಾಕಲು ಬೇವಿನ ಮಿಶ್ರಣವು ಚೆನ್ನಾಗಿ ಕೆಲಸ ಮಾಡುತ್ತದೆ. ಹತ್ತು ಎಲೆಗಳನ್ನು ತೆಗೆದುಕೊಂಡು, ಅವುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ, ಮಿಕ್ಸಿ ಮಾಡಿ ಮಿಶ್ರಣವನ್ನು ಕಂಕುಳಲ್ಲಿ ಮತ್ತು ಕಾಲಿನ ಅಡಿಭಾಗಕ್ಕೆ ಹಚ್ಚಿ ಮತ್ತು ಹತ್ತು ನಿಮಿಷಗಳ ನಂತರ ತೊಳೆಯಿರಿ.
ಆಲೂಗೆಡ್ಡೆಯನ್ನು ದುಂಡಗೆ ಕತ್ತರಿಸಿ ಕಂಕುಳ ಅಥವಾ ವಾಸನೆ ಬರುವ ಕಡೆ ಮೇಲೆ ಹತ್ತು ನಿಮಿಷಗಳ ಕಾಲ ಉಜ್ಜಿ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಕೆಲವು ದಿನಗಳ ಕಾಲ ಮಾಡಿದರೆ ದುರ್ವಾಸನೆ ದೂರವಾಗುತ್ತದೆ. ಆಲೂಗಡ್ಡೆಯನ್ನು ಹೋಳು ಮಾಡುವುದಕ್ಕಿಂತ ಪೇಸ್ಟ್ ಆಗಿ ಬಳಸುವುದು ಉತ್ತಮ.
ಅಲೋ ವೆರಾ ತಿರುಳನ್ನು ಹತ್ತಿ ಅಥವಾ ಬಟ್ಟೆಯನ್ನು ನೆನೆಸಿ ಸ್ವಲ್ಪ ಹೊತ್ತು ಇಡಿ. ಆ ಬಟ್ಟೆಯಿಂದ ದುರ್ವಾಸನೆ ಬೀರುವ ದೇಹದ ಭಾಗಗಳನ್ನು ಶುಚಿಗೊಳಿಸುವುದರಿಂದ ಕ್ರಮೇಣ ಸಮಸ್ಯೆ ನಿವಾರಣೆಯಾದಂತಾಗುತ್ತದೆ.
ದೇಹದಿಂದ ವಿಷಕಾರಿ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ವಾತಾವರಣದಲ್ಲಿನ ವಿವಿಧ ಮಾಲಿನ್ಯಕಾರಕಗಳು ದೇಹದ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ ಸಾಕಷ್ಟು ನೀರು ಮತ್ತು ಹಣ್ಣಿನ ರಸವನ್ನು ತೆಗೆದುಕೊಳ್ಳಿ. ನೆನೆಸಿದ ಸಬ್ಬಸಿಗೆ ತಿನ್ನಲು ಒಳ್ಳೆಯದು.