ರಣಜಿ ಟ್ರೋಫಿಗೆ ಫಿಕ್ಸ್ ಆಯಿತು ಡೇಟ್: ಎರಡು ಹಂತದಲ್ಲಿ ನಡೆಯುತ್ತೆ ಪಂದ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿಯ ಮೊದಲ ಹಂತವು ಫೆಬ್ರವರಿ 10ರಿಂದ ಮಾರ್ಚ್​ 15ರವರೆಗೆ ನಡೆಯಲಿದ್ದು, ದ್ವಿತೀಯ ಹಂತವನ್ನು ಐಪಿಎಲ್ ಮುಗಿದ ನಂತರ ಮೇ 30ರಿಂದ ಜೂನ್​ 26ರವರೆಗೆ ನಡೆಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಗುರುವಾರ ತಿಳಿಸಿದ್ದಾರೆ.
ರಣಜಿ ಟ್ರೋಫಿ ಆಯೋಜನೆಗಾಗಿ 9 ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಮೊದಲ ಹಂತದ ಪಂದ್ಯವಾಳಿ ಅಹ್ಮದಾಬಾದ್​, ಕೋಲ್ಕತ್ತಾ, ರಾಜ್ ಕೋಟ್​, ದೆಹಲಿ, ಗುವಾಹಟಿ, ಕಟಕ್​ ತ್ರಿವೆಂಡ್ರಮ್, ಚೆನ್ನೈ ಮತ್ತು ಹರಿಯಾಣದಲ್ಲಿ ನಡೆಯಲಿದೆ.ಬಯೋಬಬಲ್​ ಉಲ್ಲಂಘಿಸುವ ಸಾಧ್ಯತೆ ಇರುವುದರಿಂದ ನಾವು ನಮ್ಮ ಹಿಂದಿನ ಅನುಭವವನ್ನು ಪರಿಗಣಿಸಿ, ಕೆಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಜಯ್​ ಶಾ ತಿಳಿಸಿದ್ದಾರೆ.
ಯಾವುದೇ ತಂಡಕ್ಕೂ ತವರಿನಲ್ಲಿ ಆಡುವುದಕ್ಕೆ ಅವಕಾಶವಿಲ್ಲ. ತವರಿನಲ್ಲಿ ಆಡಿಸಿದರೆ ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣ ಟೂರ್ನಿಯನ್ನು ಈ ರೀತಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ.
ಗುಂಪುಗಳಾಗಿ ವಿಗಂಡನೆ
ಎ ಗುಂಪು: ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಮೇಘಾಲಯ
ಬಿ ಗುಂಪು: ಬಂಗಾಳ, ಬರೋಡಾ, ಹೈದರಾಬಾದ್, ಚಂಡೀಗಢ
ಸಿ ಗುಂಪು: ಕರ್ನಾಟಕ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ
ಡಿ ಗುಂಪು: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ
ಸಿ ಗುಂಪು : ಆಂಧ್ರ ಪ್ರದೇಶ, ರಾಜಸ್ಥಾನ, ಸೇವೆಗಳು, ಮತ್ತು ಉತ್ತರಾಖಂಡ
ಎಫ್​ ಗುಂಪು: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ತ್ರಿಪುರಾ
ಜಿ ಗುಂಪು: ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ
ಹೆಚ್​ ಗುಂಪು: ದೆಹಲಿ, ತಮಿಳುನಾಡು , ಜಾರ್ಖಂಡ್, ಮತ್ತು ಛತ್ತೀಸ್‌ಗಢ
ಪ್ಲೇಟ್ ಗ್ರೂಪ್: ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!