ಕೊರೋನಾದಲ್ಲಿ ಏರಿಳಿತ: ಶಾಲೆ ಪುನಾರಂಭಕ್ಕೆ ಕೇಂದ್ರ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರಿಳಿತವಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದ ಶಾಲೆಗಳನ್ನು ಪುನಾರಂಭ ಮಾಡಿವೆ.ಹೀಗಾಗಿ ಕೇಂದ್ರ ಸರ್ಕಾರ ಶಾಲೆ ತೆರೆಯಲು ಮಾರ್ಗಸೂಚಿ ಹೊರಡಿಸಿದೆ.
ಎಲ್ಲರ ರಾಜ್ಯದ ಜೊತೆ ಮಾತುಕತೆ ನಡೆಸಿದ ಕೇಂದ್ರ ಶಿಕ್ಷಣ ಸಚಿವಾಲಯ, ಕೇಂದ್ರದ ಮಾರ್ಗಸೂಚಿ ಇದ್ದರೂ,ರಾಜ್ಯಗಳು ತಮ್ಮದೇ ಆದ ಮಾರ್ಗಸೂಚಿ ಹೊರಡಿಸಲು ಮುಕ್ತವಾಗಿವೆ ಎಂದು ತಿಳಿಸಿದೆ.

ಕೇಂದ್ರದ ಮಾರ್ಗಸೂಚಿಗಳು:

  • ಕೋವಿಡ್ ಭಯದಿಂದ ಶಾಲೆಗೆ ಹೋಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ಆನ್​ಲೈನ್​ ಶಿಕ್ಷಣ ಆಯ್ಕೆ ಮಾಡಿಕೊಳ್ಳಲು ಅವಕಾಶ
  • ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯ
  • ಶಾಲೆಗಳಲ್ಲಿ ಸಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ
    ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಕನಿಷ್ಠ 6 ಅಡಿ ಅಂತರ
  • ಎಲ್ಲೆಡೆ ಸಾಮಾಜಿಕ ಅಂತರ ಕಡ್ಡಾಯ
  • ಮಧ್ಯಾಹ್ನದ ಊಟ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
  • ಹಾಸ್ಟೆಲ್​​ಗಳಲ್ಲಿ ವಾಸ ಮಾಡುವ ಜಾಗದಲ್ಲಿ ಅಂತರ ಅಗತ್ಯ
  • ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ, ಸ್ಕ್ಯಾನಿಂಗ್​ ಕಡ್ಡಾಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!