Saturday, June 25, 2022

Latest Posts

ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ

ಹೊಸದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರಿಗೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮನವಿ ಸ್ವೀಕರಿಸಿ ಮಾತನಾಡಿ, ನೀವೆಲ್ಲರೂ ಸ್ವಲ್ಪ ಮುಂಚೆಯೇ ಸಂಘಟಿತರಾಗಿ ಮನವಿ ಸಲ್ಲಿಸಿದ್ದರೆ ಇಷ್ಟೊತ್ತಿಗೆ ತಾವುಗಳು ಸ್ವಂತ ಮನೆಯಲ್ಲಿರುತ್ತಿದ್ದಿರಿ. ಈಗ ವಿಳಂಬವಾದರೂ ಕೂಡ ಎಚ್ಚೆತ್ತುಕೊಂಡಿರುವುದು ಸಂತಸದ ಸಂಗತಿ. ಹೀಗಾಗಿ ಪತ್ರಕರ್ತರಿಗೆ ನಿವೇಶನ ನೀಡುವ ವಿಚಾರದಲ್ಲಿ ಶೀಘ್ರದಲ್ಲೇ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು, ಉಪಾಧ್ಯಕ್ಷ ನಾಕಿಕೆರೆ ತಿಪ್ಪೇಸ್ವಾಮಿ, ನಿರ್ದೇಶಕರಾದ ವಿನಾಯಕ, ರಂಗಸ್ವಾಮಿ, ಕಿರಣ್, ಸಿದ್ದು ಹಾಗೂ ಪತ್ರಕರ್ತರಾದ ಹೆಂಜಾರಪ್ಪ, ಸುರೇಶ್ ಪಟ್ಟಾಣ್, ದ್ವಾರಕನಾಥ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss