Friday, March 24, 2023

Latest Posts

‘ಫೋರ್ಬ್ಸ್ʼ ಹೊಗಳಿದ್ದ ಸಿಲಿಕಾನ್‌ ವ್ಯಾಲೀ ಬ್ಯಾಂಕೀಗ ದಿವಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಕ್‌ ಸ್ಟಾರ್ಟಪ್‌ ಗಳಿಗೆ ಹಣಕಾಸು ಸೇವೆ ನೀಡುತ್ತಿದ್ದ ಅಮೆರಿಕದ ಹೆಸರಾಂತ ʼಸಿಲಿಕಾನ್‌ ವ್ಯಾಲಿ ಬ್ಯಾಂಕ್‌ʼ ಈಗ ಮುಚ್ಚಲ್ಪಟ್ಟಿದೆ. ಅಮೆರಿಕದ ಹಣಕಾಸು ನಿಯಂತ್ರಕ ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಫೈನಾನ್ಷಿಯಲ್ ಪ್ರೊಟೆಕ್ಷನ್ ಮತ್ತು ಇನ್ನೋವೇಶನ್ ನಗದು ಕೊರತೆ ಎದುರಿಸುತ್ತಿರುವ ಕಾರಣ ನೀಡಿ ಸಿಲಿಕಾನ್‌ ವ್ಯಾಲಿ ಬ್ಯಾಂಕಿನ ಬಾಗಿಲು ಮುಚ್ಚಿದ್ದಾರೆ.

ಈಗ ಕೆಲವೇ ದಿನಗಳ ಹಿಂದೆ ಅಂದರೆ ಫೆ.16 ರಂದು ಪ್ರತಿಷ್ಟಿತ ಮಾಧ್ಯಮ ʼಫೋರ್ಬ್ಸ್‌ʼ ಈ ಬ್ಯಾಂಕನ್ನು ಹಾಡಿ ಹೊಗಳಿತ್ತು. ತನ್ನ ಲೇಖನವೊಂದರಲ್ಲಿ ಈ ಬ್ಯಾಂಕನ್ನು ಅಮೆರಿಕದ ʼಉತ್ತಮ ಬ್ಯಾಂಕುಗಳಲ್ಲೊಂದು ಎಂದು ಹೇಳಿತ್ತು. ಅಲ್ಲದೇ ಅಮೆರಿಕದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಯಲ್ಲಿ 20ನೇ ಸ್ಥಾನ ನೀಡಿತ್ತು. ಆದರೆ ಇದೀಗ ಈ ಬ್ಯಾಂಕು ನಿಯಂತ್ರಕರಿಂದ ಮುಚ್ಚಲ್ಪಟ್ಟಿದೆ.

ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಕಳೆದ ವರ್ಷದ ತನ್ನಲ್ಲಿರುವ ಠೇವಣಿ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಭಾಂಡುಗಳನ್ನು ಖರೀದಿಸಿತ್ತು. ಆದರೆ ಆರ್ಥಿಕ ಪರಿಸ್ಥಿತಿಗಳು ಪ್ರತಿಕೂಲವಾಗಿ ಅಮೆರಿಕದ ಫೆಡರಲ್‌ ಬ್ಯಾಂಕ್‌ ತೆಗೆದುಕೊಂಡ ಕ್ರಮಗಳಿಂದಾಗಿ ಬಡ್ಡಿದರಗಳು ಏರಿಕೆಯಾದ ಪರಿಣಾಮ ಲೆಕ್ಕಾಚಾರ ತಲೆಕೆಳಗಾಗಿತ್ತು. ಹೂಡಿಕೆ ಮಾಡಿದ್ದ ಹಣ ನಷ್ಟಕ್ಕೆ ಸಿಲುಕಿತ್ತು. ಸ್ಟಾರ್ಟಪ್‌ಗಳಿಗೆ ಹಣಕಾಸಿನ ಹರಿವು ಕಡಿಮೆಯಾಗಿ ಬ್ಯಾಂಕಿನ ಮೇಲೆ ಒತ್ತಡ ಹೆಚ್ಚಾಗಿತ್ತು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಜನಸಾಮಾನ್ಯರು ತಮ್ಮ ಹಣವನ್ನು ದೊಡ್ಡ ಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಶುರು ಮಾಡಿದ್ದರು. ಹೀಗಾಗಿ ಬ್ಯಾಂಕು ದಿವಾಳಿ ಹಂತಕ್ಕೆ ತಲುಪಿತ್ತು. ಒಂದು ವರದಿಯ ಪ್ರಕಾರ ಬ್ಯಾಂಕಿನ ಷೇರುಗಳು 60ಶೇಕಡಾ ದಷ್ಟು ಕುಸಿದಿದ್ದು 80 ಬಿಲಿಯನ್‌ ಡಾಲರುಗಳಷ್ಟು ಬಂಡವಾಳ ನಷ್ಟವಾಗಿದೆ. ಹೀಗೆ ದಿವಾಳಿಗೆ ತಲುಪಿದ ಬ್ಯಾಂಕಿಗೆ ಈಗ ಬೀಗ ಹಾಕಲಾಗಿದೆ. ಇದು ಅಮೆರಿಕದ ಟೆಕ್‌ ವಲಯದಲ್ಲಿ ಹಾಗೆಯೇ ಜನಸಾಮಾನ್ಯರಿಗೆ ಆತಂಕ ಸೃಷ್ಟಿಸಿದೆ. 2008ರ ನಂತರ ಇದು ಎರಡನೇ ಅತಿದೊಡ್ಡ ಬ್ಯಾಂಕಿಂಗ್‌ ಕುಸಿತ ಎನ್ನಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!