Saturday, March 25, 2023

Latest Posts

ನನ್ನನ್ನು ಜೈಲಿಗೆ ಹಾಕಬಹುದು ಆದರೆ ನನ್ನ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ: ಮನೀಶ್ ಸಿಸೋಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ನೀವು ನನ್ನನ್ನು ಜೈಲಿಗೆ ಹಾಕಿ ತೊಂದರೆ ಕೊಡಬಹುದು, ಆದರೆ ನನ್ನ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಜೈಲಿನಿಂದ ಸಂದೇಶ ಕಳುಹಿಸಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿ ಸಿಸೋಡಿಯಾ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಮಾರ್ಚ್ 17ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿದೆ.

ಈ ವೇಳೆ ನೀವು ನನ್ನನ್ನು ಜೈಲಿಗೆ ಹಾಕುವ ಮೂಲಕ ತೊಂದರೆ ಕೊಡಬಹುದು. ಆದರೆ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ತೊಂದರೆಗೊಳಗಾದರು. ಆದರೆ ಅವರ ಉತ್ಸಾಹ ಕುಂದಲಿಲ್ಲ ಎಂದು ಜೈಲಿನಿಂದ ಮನೀಷ್ ಸಿಸೋಡಿಯಾ ಕಳುಹಿಸಿದ ಸಂದೇಶವನ್ನು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!