ಮತಾಂತರಕ್ಕೆ ಬಲವಂತ: ಸಂತ್ರಸ್ತೆ ಕುಟುಂಬಕ್ಕೆ ಆರ್ಥಿಕ ನೆರವು

ಹೊಸದಿಗಂತ ವರದಿ, ಬೆಳಗಾವಿ:

ಹುಬ್ಬಳ್ಳಿಯಲ್ಲಿ ಮತಾಂತರಕ್ಕೆ ಬಲಿಯಾದ ವಾಲ್ಮೀಕಿ ಸಮಾಜದ ಮುಗ್ಧ ನೊಂದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ ವಿವಿಧ ಸಮಾಜದ ಮುಖಂಡರು ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬಸ್ಥರಿಗೆ ಧೈರ್ಯ ತುಂಬಿ, ನೆರವಿನ ಹಸ್ತ ಚಾಚಿದರು.

ಸದ್ಧಾಂ ಹುಸೇನ ಎನ್ನುವ ಆರೋಪಿ ಮುಗ್ಧ ವಿದ್ಯಾರ್ಥಿನಿಗೆ ಮೋಸ ಮಾಡಿ ಬಲವಂತದಿಂದ ಅವಳನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದಲ್ಲದೇ, ಬೆದರಿಕೆಯೊಡ್ಡಿ ಅವಳನ್ನು ಮತಾಂತರಗೊಳಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ನೊಂದಿರುವ ಕುಟುಂಬವನ್ನು ಭೇಟಿಯಾದ ವಿವಿಧ ಸಮಾಜದ ಮುಖಂಡರಾದ ಮುನಿಸ್ವಾಮಿ ಭಂಡಾರಿ,ಶ್ರೀಮಂತ ಧನಘರ ಶ್ರೀದೇವಿ ಕುಲಕರ್ಣಿಯವರ ನೇತ್ರತ್ವದಲ್ಲಿ ಆರ್ಥಿಕ ನೆರವು ನೀಡಲಾಯಿತು.

ಹುಬ್ಬಳ್ಳಿಯ ವಾಲ್ಮೀಕಿ ಸಮಾಜದ ವಿದ್ಯಾರ್ಥಿನಿಯ ತಂದೆ-ತಾಯಿ ದಿನಗೂಲಿ ಮಾಡಿ ಜೀವನ ನಡೆಸಬೇಕಾದ ಅನಿವಾರ್ಯತೆ ಇದ್ದು, ತೀರ ಬಡ ಕುಟುಂಬದ ಹಾಗೂ ಹಿಂದುಳಿ ವಾಲ್ಮೀಕಿ ಸಮಾಜದ ಸಂತ್ರಸ್ತ ವಿದ್ಯಾರ್ಥಿನಿ ಬಾಳು ಹಸನಾಗಿಸಲು ಸಮಾಜದ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಅಲ್ಲದೇ, ತೊಂದರೆಗೊಳಗಾಗಿರುವ ಆಕೆಯ ಕುಟುಂಬಕ್ಕೆ ನೆರವಿನ ಹಸ್ತ ಚಾಚಬೇಕೆಂದು ಮುಖಂಡರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಒಬ್ಬ ದಲಿತ ಸಮಾಜದ ಹೆಣ್ಣು ಮಗಳನ್ನು ಸಮಾಜದಲ್ಲಿ ಉಳಿಸಲು, ಅವಳಿಗೆ ವಿದ್ಯಾಭ್ಯಾಸದ ಜೊತೆಗೆ ಕೌನ್ಸಲಿಂಗ್ ಅವಶ್ಯಕತೆಯಿದೆ. ಇದಕ್ಕೆಲ್ಲ ಧನ ಸಹಾಯ ಸಹಿತ ಅವಶ್ಯಕ ಎನ್ನುವುದು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಅಭಿಪ್ರಾಯಪಟ್ಟರು.

ಶಿವಾಜಿ ಶಹಾಪುರಕರ, ವಿಜಯ ನೀರಗಟ್ಟಿ, ಶಣ್ಮುಖ ಆದೀಯೇಂದ್ರ, ಮೋಹನ ಪೂಜಾರಿ, ನಾನಾಗೌಡಾ ಪಾಟೀಲ, ಅಶೋಕ ಅನ್ವೇಕರ, ಶ್ರೀಮತಿ ಪಂಕಜ ಭಟ್, ಶಶಿಕಲಾ ಚೌಧರಿ, ಕೃಷ್ಣ ಭಟ್ಟ ಅವರು ಸೇರಿದಂತೆ ಮುಂತಾದವರು 11 ಸಾವಿರ ರೂ.ಗಳ ಚೆಕ್ ನ್ನು ಸಂತ್ರಸ್ತ ವಿದ್ಯಾರ್ಥಿನಿ ತಾಯಿಗೆ ಕೊಡಲಾಯಿತು.

ಅದೇ ರೀತಿ ಹತ್ಯೆಗೀಡಾದ ಅಂಜಲಿ ಅಂಬಿಗೇರ ಅವರ ಮನೆಗೂ ಭೇಟಿ ಕೊಟ್ಟು ಆ ಕುಟುಂಬಕ್ಕೆ 11 ಸಾವಿರ ರೂ.ಗಳನ್ನು ನೆರವು ನೀಡಲಾಯಿತು. ತುಂಬಾ ಕಷ್ಟದಲ್ಲಿರುವ ಅಂಜಲಿ ಅಜ್ಜಿ ಇನ್ನೂ ಎರಡು ಹೆಣ್ಣು ಮಕ್ಕಳನ್ನು ಸಾಕಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೂ ನೆರವು ಒದಗಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!