ಆರೋಪಿಯನ್ನು ಬಂಧಿಸಲು ಹೋದ ಪೊಲಿಸರ ಮೇಲೆ ಕಲ್ಲು ತೂರಾಟ

ಹೊಸದಿಗಂತ ವರದಿ,ಶಿರಸಿ:

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಹೋದ ಪೊಲಿಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಮಳಲಿಯಲ್ಲಿ ನಡೆದಿದೆ.

ಅರ್ಜುನ್ ಅಲಿಯಾಸ ಅರುಣ ಲಕ್ಷ್ಮಣ ಗೌಡ 27 ವರ್ಷ, ನಾಗವೇಣಿ ಲಕ್ಷ್ಮಣ ಗೌಡ 50 ವರ್ಷ. ಬಾಲಚಂದ್ರ ಗೌಡ 42 ವರ್ಷ ಎಂಬುವರೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರಾಗಿದ್ದಾರೆ.

ಆರೋಪಿ ಅರ್ಜುನ್ ಅಲಿಯಾಸ ಅರುಣ ಲಕ್ಷ್ಮಣ ಗೌಡ ಎಂಬಾತ ಹಲವು ಪ್ರಕರಣಗಳಲ್ಲಿ ಆರೋಪಿತನಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ವಾರೆಂಟ್ ಆದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಲು ಶುಕ್ರವಾರ ರಾತ್ರಿ ಮಳಲಿಗೆ ತೆರಳಿದ್ದರು. ಈ ವೇಳೆಯಲ್ಲಿ ಪೊಲೀಸರು ಬಂದ ವಿಷಯ ತಿಳಿದು ಆರೋಪಿತನು ಪೊಲೀಸರ ಮೇಲೆ ಕಲ್ಲು ಹಾಗೂ ಹೆಂಚುಗಳಿಂದ ದಾಳಿ ನಡೆಸಿ ಮೂವರು ಪೊಲೀಸರಿಗೆ ಗಾಯವಾಗಿದೆ.

ಬನವಾಸಿ ಪೊಲೀಸ್ ಠಾಣೆಯ ಜಗದೀಶ ಕೆ., ಮಂಜಪ್ಪ ಪಿ., ಮಂಜುನಾಥ ಡಿ. ನಡುವಿನ ಮನೆ ಎಂಬುವವರ ಮೇಲೆ ಹಲ್ಲೆಯಾಗಿದ್ದು, ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಅಲಿಯಾಸ ಅರುಣ ಲಕ್ಷ್ಮಣ ಗೌಡನ ಮೇಲೆ ಕುಂದಾಪುರ, ಶಿರಸಿ, ಬನವಾಸಿ ಸೇರಿದಂತೆ ಹಲವು ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ಈತ ಕಂಪ್ಯೂಟರ್ ವ್ಯವಹಾರದಲ್ಲಿ ಅತಿ ಸೂಕ್ಷ್ಮನಾಗಿದ್ದು, ಯುವತಿಯ ಜೊತೆ ಚಾಟ್ ಮಾಡುತ್ತ ಅವರನ್ನು ಲಪಟಾಯಿಸುವ ಕೆಲಸವನ್ನು ಮಾಡುತ್ತಿದ್ದ. ನಂತರ ಆ ಯುವತಿಯರ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಆರೋಪಿತನನ್ನು ಪೊಲೀಸರು ಹಿಡಿಯಲು ಹೋದಾಗ ಪೊಲಿಸರ ಮೇಲೆ ಹಲ್ಲೆ ನಡೆಸಿ ನಂತರ ಇಲಿ ಮದ್ದನ್ನು ತಿಂದು ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಪ್ರತಾಪ ಪಚ್ಚಪ್ಪಗೋಳ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!