ಎರಡನೇ ಹೆಂಡ್ತಿ ಬಿಟ್ಟು ಬರುವಂತೆ ಒತ್ತಾಯ: ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನು ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.

ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ. ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ.

ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಶಮಾ ಪಠಾಣ್ 27ವರ್ಷದ ಈಕೆ ಧಾರವಾಡದ ನಿವಾಸಿಯಾಗಿದ್ದು ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ಎಂಬಾತನನ್ನ ಮದುವೆಯಾಗಿದ್ದಳು. ಇದಾದ ಬಳಿಕ ಗಂಡ ಹೆಂಡತಿ ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ಬಂದು ನೆಲಸಿದ್ದರು. ರಿಯಾಜ್ ರಸ್ತೆ ಬದಿಯಲ್ಲಿ ಚೆಸ್ಮಾ, ವಾಚ್ ಮಾರುವ ವ್ಯಾಪಾರ ಮಾಡುತ್ತಿದ್ದರೆ, ಶಮಾ ಮಾತ್ರ ಮನೆಯಲ್ಲೇ ಇರುತ್ತಿದ್ದಳು. ಈ ದಂಪತಿಗೆ ಮೂರು ಮಕ್ಕಳು ಸಹ ಇದ್ದು, ಸಂಸಾರ ಸುಂದರವಾಗಿತ್ತು. ಆದ್ರೆ, ಈ ಸಂಸಾರದಲ್ಲಿ ಮತ್ತೋರ್ವ ಮಹಿಳೆ ಎಂಟ್ರಿ ಕೊಡುತ್ತಾಳೆ .

ಒಂದೂವರೆ ವರ್ಷದ ಹಿಂದೆ ಹೆಂಡತಿ ಇದ್ರೂ ರಿಯಾಜ್ ಮತ್ತೊಬ್ಬಳನ್ನ ಗುಟ್ಟಾಗಿ ಮದುವೆಯಾಗಿದ್ದ. ಎರಡನೇಯ ಮದುವೆಯಾಗಿದ್ದ ರಿಯಾಜ್ ಕೆಲ ತಿಂಗಳಿಂದ ಮನೆಗೆ ಬರುವುದನ್ನ ನಿಲ್ಲಿಸಿದ್ದ. ವಾರದಲ್ಲಿ ಎರಡ್ಮೂರು ದಿನ ಬರುತ್ತಿದ್ದ. ಇದರಿಂದ ಸಂಶಯ ಬಂದು ಕೇಳಿದಾಗ ತನಗೆ ಫರ್ಜಾನಾ ಎಂಬಾಕೆ ಜೊತೆಗೆ ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದ. ಇದನ್ನ ಕೇಳಿ ಶಾಕ್ ಆಗಿದ್ದ ಶಮಾ ಮೂರು ಮಕ್ಕಳಿಗಾಗಿ ಅನಿವಾರ್ಯವಾಗಿ ರಿಯಾಜ್ ಜೊತೆಗೆ ಉಳಿದುಕೊಂಡಿದ್ದಳು. ಆದ್ರೆ, ಗಂಡ ರಿಯಾಜ್ ಮಾತ್ರ ಸರಿಯಾಗಿ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಕೆರಳಿದ್ದ ಶಮಾ ತನ್ನೊಟ್ಟಿಗೆ ಇರುವಂತೆ ಒತ್ತಾಯಿಸುತ್ತಿದ್ದಳು.

ಕೆಲ ದಿನಗಳ ಹಿಂದೆ ಎರಡನೇವಳನ್ನ ಬಿಟ್ಟು ಬಿಡುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡು ಈ ವಿಚಾರವನ್ನ ಎರಡನೇ ಹೆಂಡ್ತಿ ಫರ್ಜಾನ ಮುಂದೆ ಹೇಳಿಕೊಂಡಿದ್ದ. ಆಗ 2ನೇ ಪತ್ನಿ, ಶಮಾಳನ್ನು ಸಾಯಿಸಿಬಿಡು ಎಂದು ಸಲಹೆ ಕೊಟ್ಟಿದ್ದಾಳೆ. 2ನೇ ಹೆಂಡ್ತಿ ಕೊಟ್ಟ ಪ್ಲ್ಯಾನ್​ನಂತೆ ರಾತ್ರಿ ಮನೆಗೆ ಬಂದು ಮಲಗಿದ್ದ ಶಮಾಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನೂ ಹೆಂಡತಿಯನ್ನ ಕೊಲೆ ಮಾಡಿದ ಬಳಿಕ ಮನೆಯಲ್ಲಿದ್ದ ಮಗನೊಂದಿಗೆ ಎರಡನೇ ಹೆಂಡತಿ ಮನೆಗೆ ಹೋಗಿ ಬಂದಿದ್ದಾನೆ. ಬಳಿಕ ಆಕೆಯನ್ನ ಕರೆದುಕೊಂಡು ಅಲ್ಲಿಂದ ಊರು ಬಿಟ್ಟಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮುರಗೋಡ ಠಾಣೆ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಇತ್ತ ಶವವನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇತ್ತ ಗಂಡ ರಿಯಾಜ್ ಹಾಗೂ ಎರಡನೇ ಹೆಂಡತಿ ಫರ್ಜಾನಾ ಮೇಲೆ ಕೇಸ್ ದಾಖಲಾಗಿದ್ದು ಪರಾರಿಯಾಗಿರುವ ರಿಯಾಜ್ ಮತ್ತು ಫರ್ಜಾನಾಳಿಗೆ ಬಲೆ ಬೀಸಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!