ಮಲೆನಾಡಿನಲ್ಲಿ ಎಬಿವಿಪಿ 44ನೇ ಪ್ರಾಂತ ಸಮ್ಮೇಳನ: ಮಾದಾರ ಚೆನ್ನಯ್ಯ ಶ್ರೀಗಳಿಂದ ಪೋಸ್ಟರ್ ಬಿಡುಗಡೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ೪೪ನೇ ಪ್ರಾಂತ ಸಮ್ಮೇಳನ ೨೦೨೫ನೇ ಜನವರಿ ೩೧ ಫೆಬ್ರವರಿ ೧, ೨ ರಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜರುಗಲಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್‌ನ್ನು ಎಬಿವಿಪಿ ವತಿಯಿಂದ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಪೋಷ್ಟರ್ ಬಿಡುಗಡೆ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.

ಕಳೆದ ಬಾರಿ ೪೩ನೇ ಪ್ರಾಂತ ಸಮ್ಮೇಳನ ನವದೆಹಲಿಯಲ್ಲಿ ನಡೆಯಿತು. ರಾಜ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಆಗಮಿಸಿದ್ದರು. ೨೦೧೬ ರಲ್ಲಿ ನಡೆದ ೩೫ನೇ ರಾಜ್ಯ ಸಮ್ಮೇಳನದ ಉದ್ಘಾಟನೆಯನ್ನು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ನೆರವೇರಿಸಿದ್ದರು. ಚಿತ್ರದುರ್ಗ ನಗರದ ವಿವಿಧ ಕಾಲೇಜಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕ ಡಾ.ಸ.ರಾ. ಲೇಪಾಕ್ಷ, ಎಬಿವಿಪಿಯ ವಿಭಾಗ ಸಹ ಸಂಚಾಲರು ಗೋಪಿ, ಚಿತ್ರದುರ್ಗ ಜಿಲ್ಲಾ ಸಂಚಾಲಕರು ಕನಕರಾಜ್ ಕೋಡಿಹಳ್ಳಿ, ನಗರ ಸಹ ಕಾರ್ಯದರ್ಶಿ ಸಂಜಯ್, ಕಾರ್ಯಕರ್ತರಾದ ತಿಪ್ಪೇಶ್, ಚರಣ್, ವಿಕಾಸ್, ಮಧು, ಮನೋಜ್, ಜೀವನ್ ಹಾಜರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!